ADVERTISEMENT

9ರಂದು ಸಿಪಿಐನಿಂದ ಜನಾಂದೋಲನ ಜಾಗೃತಿ ಸಭೆ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2021, 3:00 IST
Last Updated 7 ಆಗಸ್ಟ್ 2021, 3:00 IST

ದಾವಣಗೆರೆ: ಜನ ವಿರೋಧಿ ಸರ್ಕಾರಗಳ ನೀತಿ ಖಂಡಿಸಿ ಸಿಪಿಐನಿಂದ ಆಗಸ್ಟ್‌9ರಂದು ಬೆಳಿಗ್ಗೆ 11ಕ್ಕೆಜನಾಂದೋಲನ ಜಾಗೃತಿ ಸಭೆ ಹಮ್ಮಿಕೊಳ್ಳಲಾಗಿದೆ ಎಂದುಸಿಪಿಐಜಿಲ್ಲಾ ಮಂಡಳಿ ಕಾರ್ಯದರ್ಶಿಆವರಗೆರೆ ಚಂದ್ರು ತಿಳಿಸಿದರು.

ಶುಕ್ರವಾರಸುದ್ದಿಗೋಷ್ಠಿಯಲ್ಲಿ ಮಾತನಾಡಿದಅವರು, ‘ನಗರದ ಅಶೋಕ ರಸ್ತೆಯಪಂಪಾಪತಿ ಭವನದಲ್ಲಿ ಕಾರ್ಯಕ್ರಮ ನಡೆಯಲಿದೆ. ಚಲೇಜಾವ್ ಚಳವಳಿಯ ಸ್ಮರಣೆ ದಿನದ ಅಂಗವಾಗಿ ಜನಾಂದೋಲನ ಹಮ್ಮಿಕೊಳ್ಳಲಾಗಿದೆ. ದೇಶದಲ್ಲಿ ಬಡತನ, ಹಸಿವು, ನಿರುದ್ಯೋಗ, ಅಸಮಾನತೆ ತಾಂಡವವಾಡುತ್ತಿದೆ. ಕೇಂದ್ರ ಸರ್ಕಾರ ಯಾವ ಸಮಸ್ಯೆಗೂ ಪರಿಹಾರ ನೀಡದೆ ಜನವಿರೋಧಿ ನೀತಿ ಅನುಸರಿಸುತ್ತಿದೆ. ಇದನ್ನು ಖಂಡಿಸಿಜನಾಂದೋಲನ ನಡೆಸಲಾಗುತ್ತದೆ. ದಾವಣಗೆರೆ ಜಿಲ್ಲೆ ಸೇರಿ ಬೆಂಗಳೂರು, ಮಂಗಳೂರು, ಕಲಬುರ್ಗಿ, ಮೈಸೂರು ಜಿಲ್ಲೆಗಳಲ್ಲಿ ಜಾಗೃತಿ ಸಭೆಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ಜನಾಂದೋಲನ ಜಾಗೃತಿ ಸಭೆಯನ್ನು ಸಿಪಿಐ ರಾಜ್ಯ ಮಂಡಳಿ ಸದಸ್ಯ ಡಾ.ಸಿದ್ದನಗೌಡ ಪಾಟೀಲ್ ಉದ್ಘಾಟಿಸುವರು. ಜಿಲ್ಲಾ ಮಂಡಳಿ ಖಜಾಂಚಿ ಆನಂದರಾಜ್ ಅಧ್ಯಕ್ಷತೆ ವಹಿಸುವರು.ಸಿಪಿಐ ಮತ್ತು ಎಐಟಿಯುಸಿ ಸಂಘಟನೆಯ ಪದಾಧಿಕಾರಿಗಳು,ಕಾರ್ಯಕರ್ತರು ಭಾಗವಹಿಸಲಿದ್ದಾರೆಎಂದರು.

ADVERTISEMENT

‘ಕೇಂದ್ರ ಸರ್ಕಾರ ಸಾಮ್ರಾಜ್ಯಶಾಹಿ ಬ್ರಿಟಿಷರಿಗಿಂತಲೂ ಜನವಿರೋಧಿ ಆಡಳಿತ ನಡೆಸುತ್ತಿದೆ. ಕೊರೊನಾದಲ್ಲಿಜನರ ಜೀವದೊಂದಿಗೆ ಚೆಲ್ಲಾಟವಾಡಿದೆ. ಲಾಕ್‍ಡೌನ್ಹೆಸರಿನಲ್ಲಿ ಜನರನ್ನು ಮನೆಗಳಲ್ಲಿ ಬಂಧಿಸಿಟ್ಟು ಕೋಟ್ಯಂತರ ಜನರನ್ನು ಕೆಲಸ ಆಹಾರ ಮತ್ತು ಆರೋಗ್ಯ ಸೌಲಭ್ಯಗಳಿಲ್ಲದೇ ಅನಾಥರನ್ನಾಗಿ ಮಾಡಿದೆ. ಆನ್‍ಲೈನ್ ಶಿಕ್ಷಣದ ಬಗ್ಗೆ ಸರಿಯಾದ ನೀತಿ ರೂಪಿಸದೇ ಇದ್ದುದರಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ.ಲಾಕ್‍ಡೌನ್ಸಂದರ್ಭದಲ್ಲಿ ಸಂಸತ್ತಿನಲ್ಲಿಚರ್ಚಿಸದೇರೈತ ವಿರೋಧಿ, ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದು ಕಾರ್ಪೊರೇಟ್‌ ಕಂಪನಿಗಳಪರ ನೀತಿ ರೂಪಿಸಿದೆ’ ಎಂದು ದೂರಿದರು.

ಸುದ್ದಿಗೋಷ್ಠಿಯಲ್ಲಿ ಸಿಪಿಐಜಿಲ್ಲಾ ಖಜಾಂಚಿ ಆನಂದರಾಜ್, ಸಹಕಾರ್ಯದರ್ಶಿಗಳಾದ ಎಚ್.ಜಿ. ಉಮೇಶ್,
ಆವರಗೆರೆ ವಾಸು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.