ಹೊನ್ನಾಳಿ: ಪಟ್ಟಣ ಸಮೀಪದ ಹಿರೇಮಠ ಹೊರವಲಯದಲ್ಲಿರುವ ಕೆರೆಯ ನೀರನ್ನು ಪಂಪ್‍ಸೆಟ್ ಮೂಲಕ ಖಾಲಿ ಮಾಡಿಸಿ, ಮೀನು ಹಿಡಿಯಲು ಮುಂದಾಗಿದ್ದ ಏಳುಮಲೈ ಎಂಬುವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ ಎಂದು ಮುಖ್ಯಾಧಿಕಾರಿಗೆ ಇಲ್ಲಿನ ತಹಶೀಲ್ದಾರ್ ಪಟ್ಟರಾಜಗೌಡ ಅವರು ಸೂಚನೆ ನೀಡಿದ್ದಾರೆ.
ಏಳುಮಲೈ ಬಹಳ ವರ್ಷಗಳಿಂದ ಈ ಕೆರೆಯಲ್ಲಿ ಮೀನಿನ ಮರಿಬಿಟ್ಟು ಮೀನು ಸಾಕಾಣಿಕೆ ಮಾಡುತ್ತಿದ್ದರು. ಈ ಕೆರೆ ಪುರಸಭೆ ವ್ಯಾಪ್ತಿಗೆ ಸೇರಿದ್ದು, ಇಲ್ಲಿ ಮೀನು ಸಾಕಾಣಿಕೆಗೆ ಕಾನೂನುಬದ್ಧವಾಗಿ (ಟೆಂಡರ್ ಮೂಲಕ) ಅನುಮತಿ ಪಡೆದುಕೊಂಡಿಲ್ಲ ಎಂದು ತಹಶೀಲ್ದಾರ್ ತಿಳಿಸಿದ್ದಾರೆ.
ಕೆರೆಯಲ್ಲಿದ್ದ ಮೀನುಗಳನ್ನು ಹಿಡಿಯಲು ಎರಡು ಪಂಪ್‍ಸೆಟ್‌ಗಳನ್ನು ಬಳಸಿ ನೀರು ಖಾಲಿ ಮಾಡಿಸುತ್ತಿದ್ದ ಸಂದರ್ಭದಲ್ಲಿ ಪುರಸಭೆ ಅಧಿಕಾರಿಗಳು ಪಂಪ್‍ಸೆಟ್‌ಗಳನ್ನು ಸೀಜ್ ಮಾಡಿದ್ದಾರೆ. ಮೀನು ಹಿಡಿಯುವುದಕ್ಕಾಗಿ ಕೆರೆಯ ನೀರನ್ನೇ ಖಾಲಿ ಮಾಡಿಸಲು ಹೊರಟ ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮೌಖಿಕ ಸೂಚನೆ ನೀಡಲಾಗಿದೆ ಎಂದು ತಹಶೀಲ್ದಾರ್ ತಿಳಿಸಿದರು.
ಪುರಸಭೆ ಮುಖ್ಯಾಧಿಕಾರಿ ಟಿ.ಲೀಲಾವತಿ, ಆರೋಗ್ಯ ನಿರೀಕ್ಷಕ ಪರಮೇಶ್ವರನಾಯ್ಕ, ಕಂದಾಯ ಅಧಿಕಾರಿ ಮೋಹನ್, ಮುಖಂಡರಾದ ಗಿರೀಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.