ADVERTISEMENT

ಮಕ್ಕಳಲ್ಲಿರುವ ಪ್ರತಿಭೆ ಹೊರಹೊಮ್ಮಿಸುವ ಕೆಲಸವಾಗಲಿ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2021, 3:56 IST
Last Updated 25 ಅಕ್ಟೋಬರ್ 2021, 3:56 IST
ದಾವಣಗೆರೆಯಲ್ಲಿ ಭಾನುವಾರ ಬಾದರದಿನ್ನಿ ಆರ್ಟ್ಸ್‌ ಅಕಾಡೆಮಿ ಹಾಗೂ ದಾವಣಗೆರೆ ರಂಗ ಅನಿಕೇತನ ಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಿದ್ದ ರಂಗ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಶಿಬಿರಾರ್ಥಿಗಳು
ದಾವಣಗೆರೆಯಲ್ಲಿ ಭಾನುವಾರ ಬಾದರದಿನ್ನಿ ಆರ್ಟ್ಸ್‌ ಅಕಾಡೆಮಿ ಹಾಗೂ ದಾವಣಗೆರೆ ರಂಗ ಅನಿಕೇತನ ಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಿದ್ದ ರಂಗ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಶಿಬಿರಾರ್ಥಿಗಳು   

ದಾವಣಗೆರೆ: ರಂಗಭೂಮಿಯ ಮೂಲಕ ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರ ತೆಗೆಯುವ ಕೆಲಸವಾಗಬೇಕು ಎಂದು ರಂಗಕರ್ಮಿ ಮಹಾಂತೇಶ್ ಆದಿಮ ತಿಳಿಸಿದರು.

ನಗರದ ಸರ್ಕಾರಿ ಐ.ಟಿ.ಐ. ಕಾಲೇಜ್ ಸಭಾಂಗಣದಲ್ಲಿ ಭಾನುವಾರ ಬಾದರದಿನ್ನಿ ಆರ್ಟ್ಸ್‌ ಅಕಾಡೆಮಿ ಹಾಗೂ ದಾವಣಗೆರೆ ರಂಗ ಅನಿಕೇತನ ಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಿದ್ದ ರಂಗ ತರಬೇತಿ ಕಾರ್ಯಾಗಾರಕ್ಕೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.

ಇಂದಿನ ಮಕ್ಕಳು ಮೊಬೈಲ್ ಹಾಗೂ ಟಿ.ವಿ.ಗೆ ಅಂಟಿಕೊಂಡಿದ್ದಾರೆ. ರಂಗಭೂಮಿ ಚಟುವಟಿಕೆ ಮೂಲಕ ಮಕ್ಕಳಲ್ಲಿ ಶಿಸ್ತನ್ನು ಬೆಳೆಸಬಹುದು. ಅವರು ಮಾನಸಿಕವಾಗಿ ಗಟ್ಟಿಗೊಳ್ಳುವಂತೆ ಮಾಡಬಹುದು. ಮಕ್ಕಳಿಗೆ ಬಾಲ್ಯದಿಂದಲೇ ರಂಗಭೂಮಿಯನ್ನು ಪರಿಚಯಿಸುವ ಕೆಲಸವಾಗಬೇಕು. ಮಕ್ಕಳಲ್ಲಿ ಕಲೆ, ಸಾಹಿತ್ಯ, ಜಾನಪದ ಹಾಗೂ ರಂಗಭೂಮಿಯ ಬಗ್ಗೆ ಆಸಕ್ತಿ ಮೂಡುವಂತೆ ಪೋಷಕರು ಮಾಡಬೇಕು ಎಂದು ತಿಳಿಸಿದರು.

ADVERTISEMENT

ಬಾದರದಿನ್ನಿ ಆರ್ಟ್ಸ್‌ ಅಕಾಡೆಮಿ ಕಾರ್ಯದರ್ಶಿ ಪ್ರಕಾಶ್ ಬಾದರದಿನ್ನಿ, ‘ರಂಗಕಲೆ ನೈಜ ಕಲೆ. ಅದು ಎಂದಿಗೂ ನಶಿಸಿ ಹೋಗಲು ಸಾಧ್ಯವಿಲ್ಲ. ಜಗತ್ತು ಎಷ್ಟೇ ಆಧುನಿಕತೆ ಹೊಂದಿದರೂ ರಂಗಕಲೆ ತನ್ನ ಅಸ್ತಿತ್ವವನ್ನು ಕಳೆದುಕೊಂಡಿಲ್ಲ. ಟಿ.ವಿ, ಮೊಬೈಲ್‍ನ ಹಾವಳಿ ಎಷ್ಟೇ ಇದ್ದರು ಇನ್ನೂ ಕೂಡ ರಂಗಭೂಮಿ ಹೊಸ ಪ್ರತಿಭೆಗಳನ್ನು ಸೆಳೆಯುತ್ತಿದೆ. ರಂಗಭೂಮಿಯಿಂದ ಬೆಳೆದ ಅನೇಕ ನಟರು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ’ ಎಂದು ಹೇಳಿದರು.

ರಂಗ ಅನಿಕೇತನದ ಸುಧಾ ಎಚ್.ಎನ್. ಹಾಗೂ ಪ್ರತಿಭಾ ದೊಗ್ಗಳ್ಳಿ, ಕಲಾವಿದರಾದ ಶಶಿಧರ್, ವಿನಯ್, ಡಾ.ಸೀಮಾ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.