ADVERTISEMENT

ದಾವಣಗೆರೆ: ಲೋಕಾಯುಕ್ತ ಬಲೆಗೆ ಮಹಾನಗರ ಪಾಲಿಕೆ ವ್ಯವಸ್ಥಾಪಕ ವೆಂಕಟೇಶ್

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2022, 17:52 IST
Last Updated 6 ನವೆಂಬರ್ 2022, 17:52 IST
ವೆಂಕಟೇಶ್
ವೆಂಕಟೇಶ್   

ದಾವಣಗೆರೆ: ಜಕಾತಿ ಸಂಬಂಧ ಟೆಂಡರ್ ಕೊಡಲು ಲಂಚ ಪಡೆಯುವಾಗ ಇಲ್ಲಿನ ಮಹಾನಗರ ಪಾಲಿಕೆ ವ್ಯವಸ್ಥಾಪಕ (ಮ್ಯಾನೇಜರ್) ವೆಂಕಟೇಶ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಕೃಷ್ಟಪ್ಪ ಎಂಬವರಿಗೆ ಜಕಾತಿ ಟೆಂಡರ್ ನೀಡಲು ಒಟ್ಟು ₹ 7 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದು, ₹ 2 ಲಕ್ಷವನ್ನು ಮುಂಗಡವಾಗಿ ಪಡೆದಿದ್ದರು. ಉಳಿದ ₹ 5 ಲಕ್ಷವನ್ನು ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದರು.

‘ಅಷ್ಟು ಹಣವನ್ನು ಕೊಡಲು ಆಗುವುದಿಲ್ಲ. ₹ 3 ಲಕ್ಷ ಕೊಡುತ್ತೇನೆ’ ಎಂದು ಕೃಷ್ಣಪ್ಪ ಹೇಳಿದ್ದರು. ಪಾಲಿಕೆ ಕಚೇರಿಯಲ್ಲಿ ಈ ಹಣವನ್ನು ಪಡೆಯುವ ವೇಳೆ ಲೋಕಾಯುಕ್ತರಿಗೆ ಸಿಕ್ಕಿ ಬಿದ್ದಿದ್ದಾರೆ.

ಲೋಕಾಯುಕ್ತ ಎಸ್ಪಿ ಎಂ.ಎಸ್.ಕೌಲಾಪುರೆ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್‌ಗಳಾದ ಆಂಜನೇಯ ಹಾಗೂ ಇತರರು ದಾಳಿ ನಡೆಸಿದ್ದರು. ಪಡೆದ ಲಂಚದಲ್ಲಿ ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಅವರಿಗೂ ಪಾಲು ಇದೆ ಎನ್ನಲಾಗಿದ್ದು, ತನಿಖೆಯಿಂದ ಗೊತ್ತಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.