
ಮಲೇಬೆನ್ನೂರು: ಇಲ್ಲಿನ ಹಜರತ್ ಸೈಯದ್ ಹಬೀಬುಲ್ಲಾ ಷಾ ಖಾದ್ರಿ ಉರುಸ್ ಪ್ರಯುಕ್ತ ಬುಧವಾರ ಗಂಧ (ಸಂಧಲ್) ಮೆರವಣಿಗೆ ಪಟ್ಟಣದಲ್ಲಿ ವೈಭವದಿಂದ ನಡೆಯಿತು.
ಮುಸ್ಲಿಂ ಧರ್ಮ ಗುರುಗಳು ಹಿಂದೂಗಳ ಮನೆಯಲ್ಲಿ ಶ್ರೀಗಂಧವನ್ನು ಪೂಜಿಸಿ ಪಡೆದರು. ದರ್ಗಾ ಷರೀಫ್‌ನಿಂದ ಆರಂಭವಾದ ಮೆರವಣಿಗೆ ಪಟ್ಟಣದ ರಾಜಬೀದಿಯಲ್ಲಿ ಸಾಗಿ ಬಂದಿತು.
ಗಂಧದ ಮೆರವಣಿಗೆ ವೇಳೆ ಹಿಂದೂ ಧರ್ಮೀಯರು ಸಕ್ಕರೆ ನಿವೇದಿಸಿ ಭಕ್ತಿ ಸಮರ್ಪಿಸಿದರು. ವಾದ್ಯವೃಂದ, ಬ್ಯಾಂಡ್ ಸೆಟ್, ಫಕೀರರ ಪವಾಡ ಗಮನ ಸೆಳೆದವು.
ಉರುಸ್ ಸಮಿತಿ ಪದಾದಿಕಾರಿಗಳು, ಮುಸ್ಲಿಂ ಸಮಾಜದ ಮುಖಂಡರು ಇದ್ದರು. ಧ್ವಜ ಹಾಗೂ ಡಿಜೆ ಸಂಗಿತ ಇರಲಿಲ್ಲ. ಶುಭಾಶಯ ಕೋರುವ ಫ್ಲೆಕ್ಸ್ , ಬ್ಯಾನರ್, ಬಂಟಿಂಗ್ಸ್ ಹೆಚ್ಚು ಇದ್ದವು.
ಖವ್ವಾಲಿ: ದರ್ಗಾ ಮೈದಾನದಲ್ಲಿ ಮಾ. 22ರಂದು ರಾತ್ರಿ ಖವ್ವಾಲಿ ಗಾಯನ ಕಾರ್ಯಕ್ರಮವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.