ADVERTISEMENT

ಗಂಜೀನಹಳ್ಳಿ: ಹಾವು ಕಚ್ಚಿ ಎತ್ತು ಸಾವು

​ಪ್ರಜಾವಾಣಿ ವಾರ್ತೆ
Published 22 ಜನವರಿ 2025, 15:47 IST
Last Updated 22 ಜನವರಿ 2025, 15:47 IST

ಗಂಜೀನಹಳ್ಳಿ (ನ್ಯಾಮತಿ): ತಾಲ್ಲೂಕಿನ ಗಂಜೀನಹಳ್ಳಿ ಗ್ರಾಮದ ರೈತ ಕೊಡಚಗೊಂಡನಹಳ್ಳಿ ಹಾಲಪ್ಪ ಅವರ ಸಾಕು ಎತ್ತಿಗೆ ಮಂಗಳವಾರ ಹಾವು ಕಚ್ಚಿದ ಪರಿಣಾಮ ಸಾವನ್ನಪ್ಪಿದೆ.

ತಮ್ಮ ಜಮೀನಿನಲ್ಲಿ ಎರಡು ಎತ್ತುಗಳನ್ನು ಕಟ್ಟಿದ್ದರು. ಈ ವೇಳೆ ಒಂದು ಎತ್ತಿಗೆ ಹಾವು ಕಚ್ಚಿದ್ದರಿಂದ ಸ್ಥಳದಲ್ಲಿಯೇ ಮರಣ ಹೊಂದಿದೆ. ಇದರಿಂದ ಅಂದಾಜು ₹ 60,000 ನಷ್ಟವಾಗಿದೆ. ಪಶು ವೈದ್ಯರು ತಪಾಸಣೆ ಮಾಡಿದ ಬಳಿಕ ಸ್ವಂತ ಜಮೀನಿನಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು ಎಂದು ರೈತ ಹಾಲಪ್ಪ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT