ADVERTISEMENT

‘ನಮ್ಮ ದವನ-–2022’ಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2022, 2:44 IST
Last Updated 24 ಜೂನ್ 2022, 2:44 IST
ದಾವಣಗೆರೆಯ ಬಿಐಇಟಿ ಕಾಲೇಜಿನಲ್ಲಿ ಮೂರು ದಿನಗಳ ಕಾಲ ಆಯೋಜಿಸಿದ್ದ ‘ನಮ್ಮ ದವನ– 2022’ ಕಾರ್ಯಕ್ರಮ ಗುರುವಾರ ಆರಂಭಗೊಂಡಿತು. –ಪ್ರಜಾವಾಣಿ ಚಿತ್ರ
ದಾವಣಗೆರೆಯ ಬಿಐಇಟಿ ಕಾಲೇಜಿನಲ್ಲಿ ಮೂರು ದಿನಗಳ ಕಾಲ ಆಯೋಜಿಸಿದ್ದ ‘ನಮ್ಮ ದವನ– 2022’ ಕಾರ್ಯಕ್ರಮ ಗುರುವಾರ ಆರಂಭಗೊಂಡಿತು. –ಪ್ರಜಾವಾಣಿ ಚಿತ್ರ   

ದಾವಣಗೆರೆ:ನಗರದ ಬಾಪೂಜಿ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದಲ್ಲಿ ‘ನಮ್ಮ ದವನ-2022’ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮಗಳು ಗುರುವಾರ ಉದ್ಘಾಟನೆಗೊಂಡವು.

ವಿದ್ಯಾಲಯದ ಸಿವಿಲ್ ಸೆಮಿನಾರ್ ಹಾಲ್‌ನಲ್ಲಿ ಆರ್.ಎಲ್. ಕಾನೂನು ಕಾಲೇಜಿನ ಪ್ರಾಚಾರ್ಯ ಡಾ. ಸೋಮಶೇಖರಪ್ಪ ಚಾಲನೆ ನೀಡಿದರು. ಬಾಪೂಜಿ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ಪ್ರಾಚಾರ್ಯ ಡಾ. ಎಂ. ಎಸ್. ರಾಜಕುಮಾರ್ ಅತಿಥಿಗಳಾಗಿದ್ದರು. ಬಿಐಇಟಿ ಕಾಲೇಜಿನ ನಿರ್ದೇಶಕ ಪ್ರೊ. ವೈ. ವೃಷಭೇಂದ್ರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಅರವಿಂದ್ ಅವರೂ ಇದ್ದರು.

ಜೂನ್‌ 25ರವರೆಗೆ ಒಟ್ಟು ಮೂರು ದಿನಗಳ ಕಾಲ ಸಂಗೀತ, ನೃತ್ಯ, ಕಲಾಪ್ರತಿಭೆ, ರಂಗಭೂಮಿ, ಕಲೆ, ಸಿನಿಮೋಟೊಗ್ರಫಿ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಇಲ್ಲಿ ವಿಜೇತರಾದವರುನು ದಾವಣಗೆರೆ ವಿಶ್ವವಿದ್ಯಾಲಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

ADVERTISEMENT

‘ಪ್ರಹಸನ, ಸ್ಟ್ಯಾಂಡ್‌ಅಪ್‌ ಕಾಮಿಡಿ, ಫೇಸ್‌ ಪೇಂಟಿಂಗ್‌, ಡುಯೆಟ್‌, ರಸಪ್ರಸ್ನೆ, ಚರ್ಚೆ, ವೆಸ್ಟರ್ನ್‌ ಸೋಲೊ, ಲೈಟ್‌ ವೋಕಲ್‌ ಇಂಡಿಯಾ, ರಂಗೋಲಿ, ಕ್ರಿಯಾಶೀಲ ಬರವಣಿಗೆ, ಆರ್ಚ್‌ ಮೇಕಿಂಗ್‌, ಫೋಟೊ ಕಾರ್ನರ್‌, ಫ್ಯಾಷನ್‌, ಗ್ರೂಪ್‌ ಡ್ಯಾನ್ಸ್‌, ಕಿರಚಿತ್ರ ನಿರ್ಮಾಣ ಹೀಗೆ ವಿವಿಧ ಸ್ಪರ್ಧೆಗಳು ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.