ADVERTISEMENT

ದಾವಣಗೆರೆ | ‘ನಮ್ಮ ದವನ–2022’: ಇನ್‌ಫಾರ್ಮೇಶನ್‌ ಸೈನ್ಸ್‌ ಚಾಂಪಿಯನ್‌

​ಪ್ರಜಾವಾಣಿ ವಾರ್ತೆ
Published 26 ಜೂನ್ 2022, 4:18 IST
Last Updated 26 ಜೂನ್ 2022, 4:18 IST
ದಾವಣಗೆರೆ ನಗರದ ಬಾಪೂಜಿ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮೂರು ದಿನಗಳ ಕಾಲ ನಡೆದ ‘ನಮ್ಮ ದವನ-2022’ ಸಾಂಸ್ಕೃತಿಕ ಸ್ಪರ್ಧೆಯಲ್ಲಿ  ಇನ್‌ಫಾರ್ಮೇಶನ್‌ ಸೈನ್ಸ್‌ ಆ್ಯಂಡ್‌ ಎಂಜಿನಿಯರಿಂಗ್‌ ವಿಭಾಗವು ಚಾಂಪಿಯನ್‌ ಆಗಿ ಹೊರಹೊಮ್ಮಿತು.
ದಾವಣಗೆರೆ ನಗರದ ಬಾಪೂಜಿ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮೂರು ದಿನಗಳ ಕಾಲ ನಡೆದ ‘ನಮ್ಮ ದವನ-2022’ ಸಾಂಸ್ಕೃತಿಕ ಸ್ಪರ್ಧೆಯಲ್ಲಿ  ಇನ್‌ಫಾರ್ಮೇಶನ್‌ ಸೈನ್ಸ್‌ ಆ್ಯಂಡ್‌ ಎಂಜಿನಿಯರಿಂಗ್‌ ವಿಭಾಗವು ಚಾಂಪಿಯನ್‌ ಆಗಿ ಹೊರಹೊಮ್ಮಿತು.   

ದಾವಣಗೆರೆ:ನಗರದ ಬಾಪೂಜಿ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮೂರು ದಿನಗಳ ಕಾಲ ನಡೆದ ‘ನಮ್ಮ ದವನ-2022’ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿದ್ಯಾಲಯದ ಇನ್‌ಫಾರ್ಮೇಶನ್‌ ಸೈನ್ಸ್‌ ಆ್ಯಂಡ್‌ ಎಂಜಿನಿಯರಿಂಗ್‌ ವಿಭಾಗವು ಚಾಂಪಿಯನ್‌ ಆಗಿ ಹೊರಹೊಮ್ಮಿದೆ.

ಕಂಪ್ಯೂಟರ್‌ ಸೈನ್ಸ್‌ ದ್ವಿತೀಯ ಸ್ಥಾನವನ್ನು ಗಳಿಸಿದೆ. ಬಯೋಟೆಕ್ನಾಲಜಿ ವಿಭಾಗದ ಅಣ್ಣೇಶ ಬಿ. ‘ದವನ ಕುಮಾರ’ ಹಾಗೂ ಇನ್‌ಫಾರ್ಮೇಶನ್‌ ಸೈನ್ಸ್‌ ಆ್ಯಂಡ್‌ ಎಂಜಿನಿಯರಿಂಗ್‌ನ ಶುಕ್ಲಾ ಆರ್‌. ವೆರ್ಣೇಕರ್‌ ‘ದವನ ಕುಮಾರಿ’ ವೈಯಕ್ತಿಕ ಚಾಂಪಿಯನ್‌ಗಳಾಗಿದ್ದಾರೆ.

ಪ್ರಶಸ್ತಿ ವಿತರಿಸಿ ಮಾತನಾಡಿದ ಸಿನಿಮಾ ನಟ ಪೃಥ್ವಿ ಶಾಮನೂರು, ‘ಹಿಂದೆ ನಾನು ಇಂಥ ಕಾರ್ಯಕ್ರಮಗಳನ್ನು ಕೆಳಗೆ ಕುಳಿತು ನೋಡುತ್ತಿದ್ದೆ. ಇಂದು ವೇದಿಕೆ ಮೇಲೆ ನಿಲ್ಲುವ ಅವಕಾಶ ಸಿಕ್ಕಿದೆ. ಬದ್ಧತೆಯಿಂದ ಕೆಲಸ ಮಾಡಿದರೆ ನೀವೆಲ್ಲರೂ ಮುಂದೆ ಸಾಧಕರಾಗಬಹುದು’ ಎಂದು ಹೇಳಿದರು.

ADVERTISEMENT

ನಟಿಯರಾದ ಅಂಜಲಿ ಅನೀಶ್, ಮಲೈಕಾ ಟಿ. ವಸುಪಾಲ್‌ ಅತಿಥಿಗಳಾಗಿದ್ದರು. ಬಿಐಇಟಿ ಕಾಲೇಜಿನ ನಿರ್ದೇಶಕ ಪ್ರೊ. ವೈ. ವೃಷಭೇಂದ್ರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಅರವಿಂದ್, ಡೀನ್‌ ಡಾ. ಎಸ್‌.ಎನ್‌. ರಮೇಶ್‌, ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು.

ಮೂರು ದಿನಗಳ ಕಾಲ ಸಂಗೀತ, ನೃತ್ಯ, ಕಲಾಪ್ರತಿಭೆ, ರಂಗಭೂಮಿ, ಕಲೆ, ಸಿನಿಮೋಟೊಗ್ರಫಿ, ಪ್ರಹಸನ, ಸ್ಟ್ಯಾಂಡ್‌ಅಪ್‌ ಕಾಮಿಡಿ, ಫೇಸ್‌ ಪೇಂಟಿಂಗ್‌, ಡುಯೆಟ್‌, ರಸಪ್ರಸ್ನೆ, ಚರ್ಚೆ, ವೆಸ್ಟರ್ನ್‌ ಸೋಲೊ, ಲೈಟ್‌ ವೋಕಲ್‌ ಇಂಡಿಯಾ, ರಂಗೋಲಿ, ಕ್ರಿಯಾಶೀಲ ಬರವಣಿಗೆ, ಆರ್ಚ್‌ ಮೇಕಿಂಗ್‌, ಫೋಟೊ ಕಾರ್ನರ್‌, ಫ್ಯಾಷನ್‌, ಗ್ರೂಪ್‌ ಡ್ಯಾನ್ಸ್‌, ಕಿರಚಿತ್ರ ನಿರ್ಮಾಣ ಹೀಗೆ ವಿವಿಧ ಸ್ಪರ್ಧೆಗಳು ನಡೆದವು. ವಿಜೇತರು ದಾವಣಗೆರೆ ವಿಶ್ವವಿದ್ಯಾಲಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.