ADVERTISEMENT

ಟೀಕೆಗೆ ಜಗ್ಗಲ್ಲ, ಕೆಲಸ ಮುಂದುವರಿಸುವೆ: ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2021, 4:46 IST
Last Updated 17 ಜೂನ್ 2021, 4:46 IST
ಹೊನ್ನಾಳಿ ತಾಲ್ಲೂಕಿನ ಅರಬಗಟ್ಟೆ ಕೋವಿಡ್ ಕೇಂದ್ರದಲ್ಲಿ ಗುಣಮುಖರಾದವರನ್ನು ಶಾಸಕ ರೇಣುಕಾಚಾರ್ಯ ಬೀಳ್ಕೊಟ್ಟರು.
ಹೊನ್ನಾಳಿ ತಾಲ್ಲೂಕಿನ ಅರಬಗಟ್ಟೆ ಕೋವಿಡ್ ಕೇಂದ್ರದಲ್ಲಿ ಗುಣಮುಖರಾದವರನ್ನು ಶಾಸಕ ರೇಣುಕಾಚಾರ್ಯ ಬೀಳ್ಕೊಟ್ಟರು.   

ಹೊನ್ನಾಳಿ: ‘ಯಾರೇ ನನ್ನ ಮೇಲೆ ಟೀಕೆ ಮಾಡಿದರೂ ಅದಕ್ಕೆ ಜಗ್ಗುವುದಿಲ್ಲ. ನನ್ನ ಕೆಲಸ ಮುಂದುವರಿಸಿಕೊಂಡು ಹೋಗುತ್ತೇನೆ’ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ಬುಧವಾರ ಅರಬಗಟ್ಟೆಯಲ್ಲಿರುವ ಕೋವಿಡ್ ಕೇಂದ್ರದಲ್ಲಿ ಕೊರೊನಾದಿಂದ ಗುಣಮುರಾದ 83 ಜನರನ್ನು ಬೀಳ್ಕೊಟ್ಟು ಮಾತನಾಡಿದರು.

‘ಕೊರೊನಾ ಸೋಂಕಿನಿಂದ ಗುಣಮುಖರಾಗಿ ಹೋಗುವವರು ತಮ್ಮ ತಮ್ಮ ಗ್ರಾಮಗಳಿಗೆ ತೆರಳಿದ ಮೇಲೆ ಕೊರೊನಾ ವಾರಿಯರ್‌ಗಳಾಗಿ ಕೆಲಸ ಮಾಡುವ ಮೂಲಕ ಕೊರೊನಾ ಜಾಗೃತಿ ಮೂಡಿಸಬೇಕು.ನಾನು ಸೋಂಕಿತ ಬಂಧುಗಳ ಸಹೋದರನಾಗಿ ಇಲ್ಲಿದ್ದುಕೊಂಡು ಕೆಲಸ ಮಾಡುತ್ತಿದ್ದೇನೆ’ ಎಂದರು.

ADVERTISEMENT

ತಾಲ್ಲೂಕಿನ ಹೊಳೆಹರಹಳ್ಳಿ ಗ್ರಾಮಸ್ಥರು ಸೋಂಕಿತರಿಗೆ ರೊಟ್ಟಿ ಹಾಗೂ ಗೋಧಿ ಪಾಯಸದ ವ್ಯವಸ್ಥೆ ಮಾಡಿಸಿದ್ದು ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.

ಯಡಿಯೂರಪ್ಪ ಹೋಂ ಪ್ರಾಡಕ್ಟ್ ಅಲ್ಲ: ‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೋಮ್ ಪ್ರಾಡಕ್ಟ್ ಅಲ್ಲ. ನೂರಾರು ಹೋರಾಟಗಳನ್ನು ಮಾಡಿಕೊಂಡು ಬಂದು ಮುಖ್ಯಮಂತ್ರಿ
ಯಾದವರು, ಅಂಥವರ ಬಗ್ಗೆ ನಿನ್ನೆ ಮೊನ್ನೆ ಬಂದವರು ಮಾತನಾಡುವುದು ಸರಿಯಲ್ಲ. ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿ, ನಾಯಕತ್ವ ಬದಲಾವಣೆಯ ಬಗ್ಗೆ ಮಾತನಾಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡುತ್ತೇನೆ’ ಎಂದರು.

ಮುಂಬರುವ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆ ಯಲ್ಲಿ ಜಯಗಳಿಸುವ ನಿಟ್ಟಿನಲ್ಲಿ ಪಕ್ಷದ ಸಂಘಟನೆ ಮಾಡಬೇಕಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.