ADVERTISEMENT

ಮಾಸ್ಕ್‌ ಧರಿಸದ ಕಾನ್‍ಸ್ಟೆಬಲ್‍ಗೆ ದಂಡ

​ಪ್ರಜಾವಾಣಿ ವಾರ್ತೆ
Published 18 ಜೂನ್ 2020, 13:12 IST
Last Updated 18 ಜೂನ್ 2020, 13:12 IST

ದಾವಣಗೆರೆ: ಮಾಸ್ಕ್ ಧರಿಸದ ಇಲ್ಲಿನ ಬಡಾವಣೆ ಪೊಲೀಸ್ ಠಾಣೆಯ ಕಾನ್‍ಸ್ಟೆಬಲ್‌ ಒಬ್ಬರಿಗೆ ಗುರುವಾರ ₹ 200 ದಂಡ ವಿಧಿಸಲಾಗಿದೆ.

ದ್ಚಿಚಕ್ರ ವಾಹನದಲ್ಲಿಹಳೇ ಬಸ್‍ನಿಲ್ದಾಣದ ಸಮೀಪ ಬರುತ್ತಿದ್ದಾಗ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹಾಗೂ ಎಸ್‍ಪಿ ಹನುಮಂತರಾಯ ತಡೆದು,ಕರ್ತವ್ಯ ಮೇಲಿದ್ದಾಗ ಮಾಸ್ಕ್ ಧರಿಸದೆ ಬರುತ್ತಿದ್ದ ಸಂಬಂಧ ದಂಡ ವಿಧಿಸಿದರು. ಅವರಿಗೆ ಉಚಿತ ಮಾಸ್ಕ್ ನೀಡಿದರು.

ಕಾನೂನು ಕಾಪಾಡುವವರೇ ಕಾನೂನು ಉಲ್ಲಂಘಿಸುವುದು ಸರಿಯಲ್ಲ ಎಂದು ಎಸ್ಪಿ ಕಾನ್‍ಸ್ಟೆಬಲ್‍ಗೆ ಎಚ್ಚರಿಕೆ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.