ADVERTISEMENT

ಸುರಕ್ಷತಾ ಕ್ರಮಕ್ಕೆ ಕ್ರಷರ್ ಗುತ್ತಿಗೆದಾರರಿಗೆ ನೋಟಿಸ್

ಹುಣಸೋಡು ಘಟನೆಯಿಂದ ಎಚ್ಚೆತ್ತ ಗಣಿ ಮತ್ತು ಭೂ ವಿಜ್ಞಾನ ಇಲಾಖೆ

ಡಿ.ಕೆ.ಬಸವರಾಜು
Published 23 ಜನವರಿ 2021, 1:16 IST
Last Updated 23 ಜನವರಿ 2021, 1:16 IST
ಬಿ.ಎನ್. ಗಿರೀಶ್
ಬಿ.ಎನ್. ಗಿರೀಶ್   

ದಾವಣಗೆರೆ: ಶಿವಮೊಗ್ಗದ ಹುಣಸೋಡು ಘಟನೆಯಿಂದಾಗಿ ಕ್ರಷರ್‌ಗಳಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳುವಂತೆ ಗುತ್ತಿಗೆದಾರರಿಗೆ ನೋಟಿಸ್ ನೀಡಲಾಗಿದೆ.

‘ಗುತ್ತಿಗೆದಾರರಿಗೆ ನೋಟಿಸ್ ಸುರಕ್ಷತಾ ಸ್ಫೋಟಕವನ್ನು ಬಳಸುವಾಗ ಯಾವ ಸಮಯಕ್ಕೆ ಬಳಸುತ್ತೀರಿ ಎಂಬುದರ ಕುರಿತ ಫಲಕ ಅಳವಡಿಸಬೇಕು. ಏಕೆಂದರೆ ಇದನ್ನು ನೋಡಿಯಾದರೂ ಜನ ಎಚ್ಚೆತ್ತುಕೊಳ್ಳುತ್ತಾರೆ. ಆ ಸಮಯದಲ್ಲಿ ಜನರು ಸಂಚರಿಸುವುದಿಲ್ಲ ಎಂಬುದು ಇಲಾಖೆಯ ಆಶಯ. ಏನಾದರೂ ಅನಾಹುತ ಸಂಭವಿಸಿದರೆ ಗುತ್ತಿಗೆದಾರರೇ ಜವಾಬ್ದಾರರು ಎಂಬ ನೋಟಿಸ್‌ನಲ್ಲಿ ಎಚ್ಚರಿಕೆ ನೀಡಲಾಗಿದೆ. ಘಟನೆಯ ನಿಮಿತ್ತ ಬಹುತೇಕ ಕ್ರಷರ್‌ಗಳು ಶುಕ್ರವಾರ ಕಾರ್ಯನಿರ್ವಹಿಸಿಲ್ಲ’ ಎಂದುಹಿರಿಯ ಭೂವಿಜ್ಞಾನಿ ಕೋದಂಡರಾಮಯ್ಯ ತಿಳಿಸಿದ್ದಾರೆ.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ನೀಡುವ ಅಂಕಿ ಅಂಶಗಳ ಪ್ರಕಾರ ಜಿಲ್ಲೆಯಲ್ಲಿ 81 ಕ್ವಾರಿಗಳು ಇದ್ದು, ಅವುಗಳಲ್ಲಿ 15ಕ್ಕೆ ಸ್ಪೋಟಿಸಲು ಪರವಾನಗಿ ನೀಡಲಾಗಿದೆ. ಅವುಗಳಲ್ಲಿ 12 ಕಾರ್ಯಾಚರಣೆ ನಡೆಸುತ್ತಿದ್ದು, 23 ಸ್ಥಗಿತಗೊಂಡಿವೆ.

ADVERTISEMENT

ದಾವಣಗೆರೆ ತಾಲ್ಲೂಕಿನಲ್ಲಿ 27, ಚನ್ನಗಿರಿ ತಾಲ್ಲೂಕಿನಲ್ಲಿ 38, ನ್ಯಾಮತಿಯಲ್ಲಿ 1, ಹೊನ್ನಾಳಿ ತಾಲ್ಲೂಕಿನಲಲಿ 14 ಹಾಗೂ ಜಗಳೂರು ತಾಲ್ಲೂಕಿನಲ್ಲಿ 1 ಕಲ್ಲು ಕ್ವಾರಿಗಳಿದ್ದು, ಅವುಗಳಲ್ಲಿ ಚನ್ನಗಿರಿ ತಾಲ್ಲೂಕಿನಲ್ಲಿ 17 ಹಾಗೂ ಹೊನ್ನಾಳಿ ತಾಲ್ಲೂಕಿನಲ್ಲಿ 6 ಕ್ವಾರಿಗಳು ವಿವಿಧ ಕಾರಣಗಳಿಂದಾಗಿ ಸ್ಥಗಿತಗೊಂಡಿವೆ.

‘ದಾವಣಗೆರೆ ತಾಲ್ಲೂಕಿನ ಆಲೂರು, ಕುರ್ಕಿಗಳಲ್ಲಿ ಅಧಿಕೃತವಾಗಿ ಕ್ರಷರ್‌ಗಳು ಇವೆ. ನಾನು ಬರುವುದಕ್ಕಿಂತ ಮೊದಲೇ ಕೆಲವು ಅನಧಿಕೃತ ಕ್ರಷರ್‌ಗಳು ಇದ್ದವು. ಅವುಗಳನ್ನು ಪತ್ತೆಹಚ್ಚಿ ಎಫ್‌ಐಆರ್‌ ಹಾಕಿದ್ದು, ಈಗ ಅವುಗಳು ಸ್ಥಗಿತಗೊಂಡಿವೆ’ ಎನ್ನುತ್ತಾರೆ’ ದಾವಣಗೆರೆ ತಹಶೀಲ್ದಾರ್ ಬಿ.ಎನ್.ಗಿರೀಶ್.

‘ಆಲೂರು ಹಾಗೂ ಕುರ್ಕಿ ಅಕ್ಕಪಕ್ಕದ ಪ್ರದೇಶಗಳಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ಬಗ್ಗೆ ದೂರುಗಳು ಬಂದ ಕಾರಣ ಅವುಗಳಿಗೆ ಎಫ್‌ಐಆರ್ ದಾಖಲಿಸಿ, ಕೋರ್ಟ್‌ ಹೋಗಿ ದಂಡ ಕಟ್ಟಿ ಅಧಿಕೃತ ಮಾಡಿಕೊಳ್ಳಿ’ ಎಂದು ಮಾಲೀಕರಿಗೆ ಎಚ್ಚರಿಕೆ ನೀಡಿದ್ದೇವೆ ಎನ್ನುತ್ತಾರೆ ಗಿರೀಶ್.

ಎಲ್ಲೆಲ್ಲಿ ಎಷ್ಟೆಷ್ಟು?
ಸ್ಫೋಟಕಕ್ಕೆ ಲೈಸೆನ್ಸ್ ಪಡೆದವು: ಕಾರ್ಯಾಚರಣೆಯಲ್ಲಿರುವುವು
ದಾವಣಗೆರೆ
: 6- 9
ಚನ್ನಗಿರಿ: 1- 1
ನ್ಯಾಮತಿ: 0- 1
ಹೊನ್ನಾಳಿ: 7- 1
ಜಗಳೂರು: 1- 0

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.