ADVERTISEMENT

‘ನಿರಂತರ ಪರಿಶ್ರಮದಿಂದ ಉನ್ನತ ಸ್ಥಾನ’

ಇಸ್ರೊ ಮಾಜಿ ಅಧ್ಯಕ್ಷ ಕಿರಣ್ ಕುಮಾರ್ ಅಭಿಮತ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2024, 14:29 IST
Last Updated 13 ಆಗಸ್ಟ್ 2024, 14:29 IST
ನ್ಯಾಮತಿಯಲ್ಲಿ ನೂತನವಾಗಿ ರಚನೆಯಾಗಿರುವ ಗುರುಶಿಷ್ಯರ ಸಂಗಮ ಸಾರ್ವಜನಿಕ ಚಾರಿಟಬಲ್ ಟ್ರಸ್ಟ್‌ ಅನ್ನು ಇಸ್ರೊ ಮಾಜಿ ಅಧ್ಯಕ್ಷ ಎ.ಎಸ್. ಕಿರಣ್ ಕುಮಾರ್ ಮಂಗಳವಾರ ಉದ್ಘಾಟಿಸಿದರು
ನ್ಯಾಮತಿಯಲ್ಲಿ ನೂತನವಾಗಿ ರಚನೆಯಾಗಿರುವ ಗುರುಶಿಷ್ಯರ ಸಂಗಮ ಸಾರ್ವಜನಿಕ ಚಾರಿಟಬಲ್ ಟ್ರಸ್ಟ್‌ ಅನ್ನು ಇಸ್ರೊ ಮಾಜಿ ಅಧ್ಯಕ್ಷ ಎ.ಎಸ್. ಕಿರಣ್ ಕುಮಾರ್ ಮಂಗಳವಾರ ಉದ್ಘಾಟಿಸಿದರು   

ನ್ಯಾಮತಿ: ವಿದ್ಯಾರ್ಥಿಗಳು ತಮ್ಮಲ್ಲಿರುವ ಕ್ಷಮತೆಯನ್ನು ಹೊರತರಲು ನಿರಂತರವಾಗಿ ಪರಿಶ್ರಮಪಡಬೇಕು ಮಾಡಬೇಕು ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆತ (ಇಸ್ರೊ) ಮಾಜಿ ಅಧ್ಯಕ್ಷ ಎ.ಎಸ್. ಕಿರಣ್‌ ಕುಮಾರ್ ಹೇಳಿದರು. 

ವಿದ್ಯಾರ್ಥಿಗಳ ಸರ್ವಾಂಗಿಣ ಅಭಿವೃದ್ಧಿ ಉದ್ದೇಶದಿಂದ ರಚನೆಯಾಗಿರುವ ಗುರುಶಿಷ್ಯರ ಸಂಗಮ ಸಾರ್ವಜನಿಕ ಚಾರಿಟಬಲ್ ಟ್ರಸ್ಟ್‌ ಅನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.

ಮನುಷ್ಯನಲ್ಲಿ ಆಗಾಧವಾದ ಶಕ್ತಿ ಇದೆ. ತನಗೆ ಸಿಕ್ಕಿರುವ ಬುದ್ಧಿ ಹಾಗೂ ಕುತೂಹಲದಿಂದ ವಿಜ್ಞಾನ ಲೋಕದಲ್ಲಿ ಹೊಸ ಹೊಸ ಆವಿಷ್ಕಾರ ಮಾಡುತ್ತಿದ್ದಾನೆ. ವಿಜ್ಞಾನಿಗಳ ಪರಿಶ್ರಮದ ಫಲವಾಗಿ ಬಾಹ್ಯಾಕಾಶದಲ್ಲಿ 60 ಉಪಗ್ರಹಗಳು ಕೆಲಸ ಮಾಡುತ್ತಿವೆ. ಬಾಹ್ಯಾಕಾಶದಲ್ಲಿ ಸಾಧನೆ ಮಾಡಿದ ಕಲ್ಪನಾಚಾವ್ಲಾ, ಸುನಿತಾ ವಿಲಿಯಮ್ಸ್‌ ಅವರಂತೆ ವಿದ್ಯಾರ್ಥಿಗಳು ಸಾಧನೆಯ ಹಾದಿಯಲ್ಲಿ ನಡೆಯಬೇಕು ಎಂದು ಸಲಹೆ ನೀಡಿದರು.

ADVERTISEMENT

ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಕುತೂಹಲಕಾರಿ ಪ್ರಶ್ನೆಗಳಿಗೆ ಸಂವಾದದಲ್ಲಿ ಅವರು ಉತ್ತರಿಸಿದರು. 

ಹಳೆಯ ವಿದ್ಯಾರ್ಥಿಗಳು ತಾವು ಓದಿರುವ ಶಾಲೆಗಳ ಅಭಿವೃದ್ಧಿಗೆ ಕಂಕಣಬದ್ಧರಾಗಬೇಕು. ಈ ನಿಟ್ಟಿನಲ್ಲಿ ರಚನೆಯಾಗಿರುವ ಟ್ರಸ್ಟ್ ಉತ್ತಮ ಕೆಲಸ ಮಾಡಲಿ ಎಂದು ವಿಶ್ರಾಂತ ಕುಲಪತಿ ಕೆ.ಸಿದ್ದಪ್ಪ ಹೇಳಿದರು. 

‘ಮನುಷ್ಯ ಮನಸ್ಸು ಮಾಡಿದರೆ ಅಸಾಧ್ಯ ಎಂಬುದು ಇಲ್ಲ. ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಂಡು, ಸಾಧಿಸುವ ಸಾಮರ್ಥ್ಯ ನನಗಿದೆ ಎಂದು ಹೊರಟರೆ ಎತ್ತರಕ್ಕೆ ಬೆಳೆಯಬಹುದು. ತಾನು ಬದುಕಿ ಬೇರೆಯವರೂ ಬದುಕಬೇಕು ಎಂಬ ಮನೋಭಾವ ಬೆಳಸಿಕೊಳ್ಳಬೇಕು’ ಎಂದು ಸಾಣೇಹಳ್ಳಿ ತರಳಬಾಳು ಶಾಖಾಮಠದ ಪೀಠಾಧ್ಯಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು. 

ಶಾಸಕ ಡಿ.ಜಿ.ಶಾಂತನಗೌಡ, ಟ್ರಸ್ಟ್‌ ಅಧ್ಯಕ್ಷ ಡಿ.ತೀರ್ಥಲಿಂಗಪ್ಪ ಮಾತನಾಡಿದರು. ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ, ರುದ್ರಪ್ಪಗೌಡ, ಬಿ.ಎಂ.ರೇಣುಕಯ್ಯ, ಸಿದ್ದೇಶಪ್ಪ ಜಿಗಣಪ್ಪರ, ಎಸ್.ಆರ್.ಬಸವರಾಜಪ್ಪ ಹಾಗೂ ಟ್ರಸ್ಟ್‌ನ ಸದಸ್ಯರು, ಶಾಲೆಯ ಹಳೆಯ ವಿದ್ಯಾರ್ಥಿಗಳು, ಗಣ್ಯರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.