ADVERTISEMENT

ಯುಗಮಾನೋತ್ಸವ: ನ್ಯಾಮತಿ ಭಕ್ತರಿಂದ ದಾಸೋಹಕ್ಕೆ ಕೊಡುಗೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2026, 5:16 IST
Last Updated 28 ಫೆಬ್ರುವರಿ 2026, 5:16 IST
ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ನಡೆಯಲಿರುವ ರೇಣುಕಾಚಾರ್ಯ ಯುಗಮಾನೋತ್ಸವ ಕಾರ್ಯಕ್ರಮಕ್ಕೆ ನ್ಯಾಮತಿ ಎಪಿಎಂಸಿ ಮಾರುಕಟ್ಟೆ ವರ್ತಕರು, ಕಿರಾಣಿ ವರ್ತಕರು ಸಾರ್ವಜನಿಕರಿಂದ ದಾಸೋಹಕ್ಕಾಗಿ ಸಂಗ್ರಹಿಸಿದ ಪದಾರ್ಥಗಳನ್ನು ಗುರುವಾರ ಅರ್ಪಿಸಲಾಯಿತು
ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ನಡೆಯಲಿರುವ ರೇಣುಕಾಚಾರ್ಯ ಯುಗಮಾನೋತ್ಸವ ಕಾರ್ಯಕ್ರಮಕ್ಕೆ ನ್ಯಾಮತಿ ಎಪಿಎಂಸಿ ಮಾರುಕಟ್ಟೆ ವರ್ತಕರು, ಕಿರಾಣಿ ವರ್ತಕರು ಸಾರ್ವಜನಿಕರಿಂದ ದಾಸೋಹಕ್ಕಾಗಿ ಸಂಗ್ರಹಿಸಿದ ಪದಾರ್ಥಗಳನ್ನು ಗುರುವಾರ ಅರ್ಪಿಸಲಾಯಿತು   

ನ್ಯಾಮತಿ: ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ನಡೆಯಲಿರುವ ರೇಣುಕಾಚಾರ್ಯ ಯುಗಮಾನೋತ್ಸವ ಕಾರ್ಯಕ್ರಮದ ದಾಸೋಹಕ್ಕಾಗಿ ಸಂಗ್ರಹಿಸಿದ ಪದಾರ್ಥಗಳನ್ನು ನಾಲ್ಕು ಮಿನಿ ಲಾರಿಗಳಲ್ಲಿ ಭರ್ತಿ ಮಾಡಿ ಗುರುವಾರ ಪೀಠಕ್ಕೆ ತೆರಳಿ ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಶ್ರೀಗಳ ಸಮ್ಮುಖದಲ್ಲಿ ಅರ್ಪಿಸಲಾಯಿತು ಎಂದು ವ್ಯವಸ್ಥಾಪಕ ಹೊಸಕಟ್ಟೆ ಬಸವರಾಜಪ್ಪ ತಿಳಿಸಿದರು.

ದಾಸೋಹಕ್ಕೆ ಭಕ್ತರಿಂದ 160 ಚೀಲ ಅಕ್ಕಿ, 25 ಚೀಲ ಬೆಲ್ಲ, 100 ತೆಂಗಿನಕಾಯಿ, ಮೂರು ಟಿನ್ ಅಡುಗೆ ಎಣ್ಣೆ, 9 ಚೀಲ ಈರುಳ್ಳಿ ಸೇರಿದಂತೆ 60 ಚೀಲಗಳಲ್ಲಿ ವಿವಿಧ ತರಕಾರಿಯನ್ನು ನೀಡಲಾಯಿತು.

ಭಕ್ತರಾದ ಎಸ್.ಎಂ.ಟಿ.ಶಿವಕುಮಾರ, ಡಿ.ಆರ್.ರುದ್ರಪ್ಪ, ಕೆಂಚಿಕೊಪ್ಪ ರೇವಣಪ್ಪ, ಹೊಸಮನೆ ಶಿವರಾಜ, ಎಚ್.ಎಂ.ಶಶಿಧರ, ಡೇರಿ ಬಯ್ಯ, ಬಾರೆಮರದ ಗುರುರಾಜ, ಮಹೇಶ, ಪೂಜಾರ ಬಸವರಾಜ, ಕಾರ್ತಿಕ, ಉಮೇಶ, ಶಿವಕುಮಾರ, ಶಂಕ್ರಣ್ಣ ತರಕಾರಿ, ಬಾಬು, ನಾಗರಾಜ, ಹಾಲೇಶ ಅವರು ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.