
ನ್ಯಾಮತಿ: ತಾಲ್ಲೂಕಿನ ಮುಸ್ಸೇನಾಳು ಗ್ರಾಮದ ರೈತರಿಗೆ ಸೇರಿದ ಅಡಿಕೆ ಮರಗಳು ಶನಿವಾರ ರಾತ್ರಿ ಆಕಸ್ಮಿಕ ಬೆಂಕಿಗೆ ಸುಟ್ಟು ಕರಕಲಾಗಿವೆ.
ಗ್ರಾಮದ ರೈತ ಧರ್ಮಿಬಾಯಿ ರಾಮನಾಯ್ಕ ಅವರ 2 ಎಕರೆಯಲ್ಲಿನ ಅಡಿಕೆ ಮರಗಳು ಬೆಂಕಿಗೆ ಸುಟ್ಟಿವೆ. ಡ್ರಿಪ್ ಪೈಪುಗಳು, ಪಿವಿಸಿ ಪೈಪ್‌ಗಳು, ಸ್ಪ್ರಿಂಕ್ಲರ್ ಸೇರಿದಂತೆ ಅಂದಾಜು ₹5 ಲಕ್ಷ ಮೌಲ್ಯದ ಸಾಮಗ್ರಿ ಹಾಗೂ 8 ಸಾಗುವಾನಿ ಮರಗಳು ಬೆಂಕಿಯಲ್ಲಿ ಸುಟ್ಟು ಕರಕಲಾಗಿವೆ.
ರಾಮನಾಯ್ಕ ಪೀರ‍್ಯಾನಾಯ್ಕ ಅವರ 1 ಎಕರೆ 25 ಗುಂಟೆಯಲ್ಲಿ ಬೆಳೆದಿದ್ದ ಅಡಿಕೆ ಮರಗಳು ಹಾಗೂ ಸಾಮಗ್ರಿ ಸುಟ್ಟಿದ್ದು, ₹ 3 ಲಕ್ಷ ನಷ್ಟ ಸಂಭವಿಸಿದೆ.
ಹಾಲಿಬಾಯಿ ರಾಜೇಶನಾಯ್ಕ ಅವರ ಎರಡೂವರೆ ಎಕರೆಯಲ್ಲಿ ಬೆಳೆದಿದ್ದ ಅಡಿಕೆ ಮರಗಳು ಹಾಗೂ ಸಾಮಗ್ರಿ ಸುಟ್ಟಿದ್ದು, ₹ 4.50 ಲಕ್ಷ ನಷ್ಟ ಸಂಭವಿಸಿದೆ.
ಗೋಪಾಲನಾಯ್ಕ ಶೇಖರನಾಯ್ಕ ಎಂಬುವರ 3 ಎಕರೆಯಲ್ಲಿನ ಅಡಿಕೆ ಮರಗಳು ಸುಟ್ಟಿದ್ದು ₹3 ಲಕ್ಷ ನಷ್ಟವಾಗಿದೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಅವಘಡ ಸಂಭವಿಸಿದೆ ಎನ್ನಲಾಗಿದೆ. ಸ್ಥಳಕ್ಕೆ ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿ ಎಚ್.ಮಂಜುನಾಥ ಭೇಟಿ ನೀಡಿದ್ದರು.
ಸ್ಥಳಕ್ಕೆ ಹೊನ್ನಾಳಿ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.