ADVERTISEMENT

ನ್ಯಾಮತಿ: ಕಾಶಿ ಯಾತ್ರೆಗೆ ತೆರಳಿದ್ದ ವೇಳೆ ಹೃದಯಾಘಾತದಿಂದ ಸಾವು

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 4:05 IST
Last Updated 21 ಫೆಬ್ರುವರಿ 2026, 4:05 IST
ಕೆ. ಹಾಲೇಶಪ್ಪ 
ಕೆ. ಹಾಲೇಶಪ್ಪ    

ನ್ಯಾಮತಿ: ಕಾಶಿ ಯಾತ್ರೆಗೆ ತೆರಳಿದ್ದ ವೇಳೆ ಯಾತ್ರಿ ಸಮೀಪದ ದಾನಿಹಳ್ಳಿ ಗ್ರಾಮದ ಕಡೇಮನೆರ ಹಾಲೇಶಪ್ಪ (71) ಅಲ್ಲಿ ಹೃದಯಾಘಾತದಿಂದ ಗುರುವಾರ ನಿಧನರಾದರು. 

ಹಾಲೇಶಪ್ಪ ಅವರು ಈಚೆಗೆ ಪತ್ನಿ ಸಮೇತ 53 ಜನರ ತಂಡದಲ್ಲಿ ಪ್ರವಾಸಕ್ಕೆ ತೆರಳಿದ್ದರು. ಕಾಶಿಯಲ್ಲಿ ತಂಗಿದ್ದಾಗ ಹೃದಯಾಘಾತವಾಗಿತ್ತು. ಕಾಶಿಯಿಂದ ಅವರ ಮೃತದೇಹವನ್ನು ಶುಕ್ರವಾರ ಗ್ರಾಮಕ್ಕೆ ತರಲಾಯಿತು. 

ಇವರಿಗೆ ಪತ್ನಿ, ಮೂವರು ಪುತ್ರರು ಇದ್ದಾರೆ. ಸ್ವಗ್ರಾಮದಲ್ಲಿ ಶನಿವಾರ ಬೆಳಿಗ್ಗೆ 11 ಗಂಟೆಗೆ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.