ADVERTISEMENT

ಈರುಳ್ಳಿ ಖರೀದಿ ಕೇಂದ್ರ ತೆರೆಯಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2018, 14:10 IST
Last Updated 11 ಡಿಸೆಂಬರ್ 2018, 14:10 IST
ಈರುಳ್ಳಿ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯುವುವಂತೆ ಆಗ್ರಹಿಸಿದ ಹರಪನಹಳ್ಳಿ ತಹಶೀಲ್ದಾರ ಅವರಿಗೆ ಮೈದೂರು ರೈತರು ಮನವಿ ಸಲ್ಲಿಸಿದರು.
ಈರುಳ್ಳಿ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯುವುವಂತೆ ಆಗ್ರಹಿಸಿದ ಹರಪನಹಳ್ಳಿ ತಹಶೀಲ್ದಾರ ಅವರಿಗೆ ಮೈದೂರು ರೈತರು ಮನವಿ ಸಲ್ಲಿಸಿದರು.   

ಹರಪನಹಳ್ಳಿ: ಬೆಂಬಲ ಬೆಲೆಯಡಿ ಈರುಳ್ಳಿ ಖರೀದಿ ಕೇಂದ್ರ ತೆರೆಯುವಂತೆ ಒತ್ತಾಯಿಸಿ ತಾಲ್ಲೂಕಿನ ಮೈದೂರು ಗ್ರಾಮದ ರೈತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಗ್ರಾಮದ ರೈತರು ಕೃಷಿಯಿಂದಲೇ ಜೀವನ ನಡೆಸುತ್ತಿದ್ದಾರೆ. 500 ಎಕರೆ ಜಮೀನಿನಲ್ಲಿ ಈರುಳ್ಳಿ ಬೆಳೆದಿದ್ದಾರೆ. ಈಗಾಗಲೇ ಕಟಾವು ಮಾಡಿ ಈರುಳ್ಳಿ ಸಂಗ್ರಹಿಸಲಾಗಿದೆ. ಆದರೆ, ಬೆಲೆ ಕುಸಿತ ಕಂಡಿರುವುದು ರೈತರಿಗೆ ಆತಂಕ ತಂದಿದೆ. ರಾಜ್ಯ ಸರ್ಕಾರ ಪಟ್ಟಣದಲ್ಲಿ ಬೆಂಬಲ ಬೆಲೆಯಡಿ ಈರುಳ್ಳಿ ಖರೀದಿ ಕೇಂದ್ರ ತೆರೆಯಬೇಕು ಎಂದು ಆಗ್ರಹಿಸಿ ತಹಶೀಲ್ದಾರಗೆ ಮನವಿ ಸಲ್ಲಿಸಿದರು.

10 ದಿನಗಳೊಳಗೆ ಖರೀದಿ ಕೇಂದ್ರ ಆರಂಭಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ರೈತ ಮುಖಂಡರು ಎಚ್ಚರಿಸಿದರು.

ADVERTISEMENT

ಕೆ. ಗುರುಲಿಂಗನಗೌಡ, ಬಿ. ಬೀರಪ್ಪ, ಟಿ. ಪ್ರಕಾಶ, ಹೆಗ್ಗನಗೌಡ, ವಿ. ರಾಮಪ್ಪ, ಕುಬೇರಪ್ಪ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.