ADVERTISEMENT

ದಾವಣಗೆರೆ: ದನವಿನ ಓಣಿಯಲ್ಲಿ 400ಕ್ಕೂ ಹೆಚ್ಚು ಅಕ್ರಮ ಗುಡಿಸಲು ತೆರವು

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2022, 9:55 IST
Last Updated 4 ಮಾರ್ಚ್ 2022, 9:55 IST
ಅಕ್ರಮವಾಗಿ ಹಾಕಿಕೊಂಡಿದ್ದ ಗುಡಿಸಲು ತೆರವು
ಅಕ್ರಮವಾಗಿ ಹಾಕಿಕೊಂಡಿದ್ದ ಗುಡಿಸಲು ತೆರವು   

ದಾವಣಗೆರೆ: ಇಲ್ಲಿನ ಆವರಗೆರೆ ಸಮೀಪ ದನವಿನಓಣಿಯಲ್ಲಿ ಅಕ್ರಮವಾಗಿ ಹಾಕಿಕೊಂಡಿದ್ದ 400ಕ್ಕೂ ಹೆಚ್ಚು ಗುಡಿಸಲುಗಳನ್ನು ಜಿಲ್ಲಾಡಳಿತ ಗುರುವಾರ ರಾತ್ರಿ ತೆರವುಗೊಳಿಸಿತು.

ಎರಡು ಬಾರಿ ಎಚ್ಚರಿಕೆ ನೀಡಿದ್ದರೂ ಗುಡಿಸಲುಗಳನ್ನು ತೆರವುಗೊಳಿಸಿರಲಿಲ್ಲ. ಇದರಿಂದ 200ಕ್ಕೂ ಹೆಚ್ಚು ಪೊಲೀಸರ ಭದ್ರತೆಯಲ್ಲಿ ಗುಡಿಸಲುಗಳನ್ನು ತೆರವುಗೊಳಿಸಿತು. ತೆರವು ವೇಳೆ ಅಡ್ಡಿಪಡಿಸಿದ 10ಕ್ಕೂ ಹೆಚ್ಚು ಸ್ಥಳೀಯರನ್ನು ಪೊಲೀಸರು ವಶಕ್ಕೆ ಪಡೆದರು..

’ನಮಗೆ ಮನೆಗಳಿಲ್ಲ. ಬಾಡಿಗೆ ಕಟ್ಟಿ ಬದುಕುವಷ್ಟು ಶಕ್ತಿ ಇಲ್ಲ. ಮತ್ತೆ ಅಲ್ಲಿ ಗುಡಿಸಲು ಹಾಕುತ್ತೇವೆ’ ಎಂದು ಸ್ಥಳೀಯರು ಪಟ್ಟು ಹಿಡಿದಿದ್ದಾರೆ.

ADVERTISEMENT

’ರಾತ್ರಿ ವೇಳೆ ನಮ್ಮನ್ನು ಎಬ್ಬಿಸಿ, ನಮ್ಮಿಂದ ಮೊಬೈಲ್ ಕಸಿದುಕೊಂಡು ಒಂದು ಕಡೆ ಕೂಡಿ ಹಾಕಿ ಗುಡಿಸಲುಗಳನ್ನು ತೆರವುಗೊಳಿಸಿದ್ದಾರೆ. ಕಷ್ಟಪಟ್ಟು ಶೀಟ್‌ಗಳನ್ನು ಖರೀದಿಸಿದ್ದೇ. ಈಗ ದಿಕ್ಕೇ ತೋಚದಂತಾಗಿದೆ’ ಸ್ಥಳೀಯರಾದ ಶಂಕರಪ್ಪ ಆರೋಪಿಸಿರು.

ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ತಹಶಿಲ್ದಾರ ಗೀರೀಶ್, ನಗರಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಹಾಗೂ ಡಿವೈಎಸ್ಪಿ ನರಸಿಂಹ ತಾಮ್ರಧ್ವಜ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.