ಹರಿಹರ: ‘ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ವನವಾಸಿ ದೇಶಮಂ’ ಎಂಬ ಆದಿಕವಿ ಪಂಪನ ಸಾಲಿನಂತೆ ಅಮೆರಿಕದ ಮಿಷಿಗನ್ ರಾಜ್ಯದ ಟ್ರಾಯ್ ನಗರದಲ್ಲಿ ನೆಲೆಸಿರುವ ಕನ್ನಡಿಗರು, ತಾವು ತಾಯ್ನಾಡಿನಿಂದ ದೂರದಲ್ಲಿದ್ದರೂ ತಮ್ಮ ಮನ, ಮನೆಗಳಲ್ಲಿ ಕನ್ನಡಾಂಬೆಯನ್ನು ಆರಾಧಿಸುತ್ತಿದ್ದಾರೆ.
‘ಪಂಪ ಕನ್ನಡ ಕೂಟ’ ಹೆಸರಿನಡಿ ಒಟ್ಟಾಗಿರುವ ಅನಿವಾಸಿ ಕನ್ನಡಿಗರು, ತಮ್ಮ ಉದ್ಯೋಗದ ಬಿಡುವಿನ ಸಮಯದಲ್ಲಿ ಕನ್ನಡದ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ರಾಜ್ಯೋತ್ಸವ, ದೀಪಾವಳಿ, ದಸರಾ, ಗಣೇಶೋತ್ಸವ ಸಂದರ್ಭದಲ್ಲಿ ಹಬ್ಬದ ಆಚರಣೆ ಹಾಗೂ ಸಂಗೀತ ಕಛೇರಿಗಳನ್ನು ಏರ್ಪಡಿಸಿ, ಅಲ್ಲಿನ ಕನ್ನಡಿಗರನ್ನು ಒಗ್ಗೂಡಿಸಿದ್ದಾರೆ’ ಎಂದು ಹರಿಹರದ ಕಾರ್ಮಿಕ ಮುಖಂಡ ಎಚ್.ಕೆ.ಕೊಟ್ರಪ್ಪ ಹೇಳಿದರು.
ಅವರು ಈಚೆಗೆ ಅಮೆರಿಕದಲ್ಲಿ ಆಯೋಜಿಸಿದ್ದ ವಾರ್ಷಿಕ ಸಂತೋಷ ಕೂಟದಲ್ಲಿ ಭಾಗವಹಿಸಿದ್ದರು.
‘ಮಿಷಿಗನ್ ರಾಜ್ಯದ ಪಂಪ ಕನ್ನಡ ಕೂಟ ಆರಂಭಿಸಿ 54 ವರ್ಷ ಕಳೆದಿವೆ. ಸಾಧಕರಿಗೆ ಪಂಪ ವರ್ಷದ ಕನ್ನಡಿಗ ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ, ಕೂಟವು ಇಲ್ಲಿರುವ ಕನ್ನಡಿಗರ ಮನಗೆದ್ದಿದೆ’ ಎಂದು ಪಂಪ ಕನ್ನಡ ಕೂಟದ ಅಧ್ಯಕ್ಷ ಪ್ರಮೋದ್ ಗೋಪಾಲ್ ಹೇಳಿದರು.
ಕೂಟದ ಉಪಾಧ್ಯಕ್ಷ ನವೀನ್ ಹಟಪಿಕಿ, ಕಾರ್ಯದರ್ಶಿ ವೆಂಕಟೇಶ್ ಪೊಳಲಿ, ಖಜಾಂಚಿ ಅಶುತೋಷ್, ಕಾರ್ಯಕಾರಿ ಸದಸ್ಯರಾದ ಪ್ರಶಾಂತ್ ಕಟ್ಟಿ, ಚನ್ನಾ ರೆಡ್ಡಿ, ರಾಘವೇಂದ್ರ ಕುಲಕರ್ಣಿ, ಪ್ರಕಾಶ್, ಸತೀಶ್, ಅನಿಲ್, ವಾಣಿ, ಶ್ರೀದೇವಿ, ಸ್ನೇಹಾ, ಪೂರ್ಣಿಮಾ, ವಾಣಿ, ಕಿಶೋರ್ ಎನ್.ಸಿ., ಅಶ್ವಿನಿ, ಶಿಲ್ಪಾ, ನೇತ್ರಾ, ಕಿರಣ್, ಅರವಿಂದ್, ರವಿ, ರಾಜೇಶ್ ಎಂ ಬಿ, ದೀಪಕ್, ಮಿಲನ್, ಶರಣಮ್ಮ ಸೇರಿದಂತೆ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.