ಫಲವನಹಳ್ಳಿ (ನ್ಯಾಮತಿ): ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ನಾಗೇಶನಾಯ್ಕ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
ಹಿಂದಿನ ಅಧ್ಯಕ್ಷ ಪಿ.ಆರ್.ಪ್ರಕಾಶನಾಯ್ಕ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯಿತು. ಅವರ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಎಸ್.ಕೆ.ಕಣುಮಪ್ಪ ಘೋಷಿಸಿದರು.
ಚುನಾವಣೆ ಪ್ರಕ್ರಿಯೆಯಲ್ಲಿ ಉಪಾಧ್ಯಕ್ಷೆ ನೇತ್ರಮ್ಮ, ಸದಸ್ಯರಾದ ಜಯಶ್ರೀ, ಅನಿತಾ, ಗೋವಿಂದರಾಜು, ಎಂ.ಸಿ.ಪ್ರವೀಣ, ಪಿ.ಆರ್.ಪ್ರಕಾಶನಾಯ್ಕ, ನಾಗೇಶನಾಯ್ಕ, ನಟರಾಜಪ್ಪ, ಎಂ.ಕೆ.ಪ್ರೀತಿ ಪಾಲ್ಗೊಂಡಿದ್ದರು.
ಪಿಡಿಒ ಎಚ್.ಎಸ್.ಸೋಮಶೇಖರ ಮತ್ತು ಸಿಬ್ಬಂದಿ ಸಹಕರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.