ಜಗಳೂರು: ತಾಲ್ಲೂಕು ಸಹಕಾರಿ ಮತ್ತು ಕೃಷಿ ಗ್ರಾಮೀಣ ಬ್ಯಾಂಕ್‌ಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಎನ್.ಎಂ.ಹಾಲಸ್ವಾಮಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚುನಾವಣೆ ಪ್ರಕ್ರಿಯೆಯಲ್ಲಿ ಒಟ್ಟು 14 ನಿರ್ದೇಶಕರು, ಒಬ್ಬರು ನಾಮನಿರ್ದೇಶಿತ ಸದಸ್ಯರು ಭಾಗಿಯಾಗಿದ್ದರು. ಎನ್.ಎಂ.ಕೆ. ಹಾಲಸ್ವಾಮಿ ಅವರನ್ನು ಸರ್ವಾನುಮತದಿಂದ ಅಧ್ಯಕ್ಷರನ್ನಾಗಿ ಘೋಷಣೆ ಮಾಡಲಾಯಿತು.
ಬ್ಯಾಂಕ್ ಆಡಳಿತ ಮಂಡಳಿ ಉಪಾಧ್ಯಕ್ಷೆ ದ್ಯಾಮಕ್ಕ, ನಿರ್ದೇಶಕರಾದ ಕೆ.ತಿಮ್ಮರಾಯಪ್ಪ,ಶ್ರೀನಿವಾಸ್,ವೀಣಾಗೋಗುದ್ದು ರಾಜು ನಿರ್ದೇಶಕರಾದ ಚೌಡಮ್ಮ , ಎಂ.ವಿ.ರಾಜು , ಎಂ.ಟಿ.ಧನಂಜಯ ರೆಡ್ಡಿ, ಬಿ.ಎಚ್. ನರೇಂದ್ರ ಬಾಬು, ಸಣ್ಣಸೂರಯ್ಯ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.