ADVERTISEMENT

ಫೈರಿಂಗ್‌ನಲ್ಲಿ ಪೊಲೀಸ್‌ ಸಾವು: ಮತ್ತೊಬ್ಬ ಪೊಲೀಸ್‌ ವಿರುದ್ಧ ಎಫ್‌ಐಆರ್

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2021, 10:03 IST
Last Updated 25 ಆಗಸ್ಟ್ 2021, 10:03 IST
ಚೇತನ್‌
ಚೇತನ್‌   

ದಾವಣಗೆರೆ: ಫೈರಿಂಗ್‌ನಿಂದಾಗಿ ಜಿಲ್ಲಾ ಶಸ್ತ್ರಾಸ್ತ್ರ ಪೊಲೀಸ್‌ ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಲಕ್ಷ್ಯ ವಹಿಸಿದ್ದ ಸಶಸ್ತ್ರಾಗಾರದ ಸಿಬ್ಬಂದಿ ವಿರುದ್ಧ ಬಡಾವಣೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆಟಿಜೆ ನಗರ ಮತ್ತು ವಿದ್ಯಾನಗರದ ಪೊಲಿಸರಿಗೆ ಫೈರಿಂಗ್‌ ತರಬೇತಿ ನೀಡಿದ ಬಳಿಕ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ (ಡಿಎಆರ್‌) ಕಚೇರಿಗೆ ತರಬೇತಿ ನೀಡುವವರು ವಾಪಸ್ಸಾಗಿದ್ದರು. ಬಳಿಕ ಸಶಸ್ತ್ರಾಗಾರದ ಮುಖ್ಯಸ್ಥರಾದ ಶರತ್‌, ತನ್ವೀರ್‌ ಮತ್ತು ಶ್ರೀನಿವಾಸ ಪೂಜಾರಿ ಶಸ್ತ್ರಗಳನ್ನು ಸ್ವಚ್ಛಗೊಳಿಸುತ್ತಿದ್ದರು. ಈ ಸಂದರ್ಭದಲ್ಲಿ ಶ್ರೀನಿವಾಸ ಪೂಜಾರಿ ಅವರ ಕೈಯಲ್ಲಿದ್ದ ಪಿಸ್ತೂಲಿನಿಂದ ಗುಂಡು ಹಾರಿದೆ. ಅದೇ ಸಮಯಕ್ಕೆ ಶಸ್ತ್ರಗಾರಕ್ಕೆ ಪ್ರವೇಶಿಸಿದ್ದ ಎಪಿಸಿ ಚೇತನ್‌ (29) ಅವರಿಗೆ ಗುಂಡು ತಗುಲಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ಮೃತಪಟ್ಟಿದ್ದರು.

ಶಸ್ತ್ರಗಾರದಲ್ಲಿ ಗುಂಡು ಹಾರುವ ಸಾಧ್ಯತೆ ಇರುವುದರ ಬಗ್ಗೆ ಅರಿವಿದ್ದರೂ ಶಸ್ತ್ರಾಗಾರದ ಕೊಠಡಿಗೆ ಬರಲು ಚೇತನ್‌ಗೆ ಅವಕಾಶ ನೀಡಿದ್ದಾರೆ ಮತ್ತು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಎಪಿಸಿ ಶ್ರೀನಿವಾಸ ಪೂಜಾರಿ ಮೇಲೆ ಆರ್‌ಪಿಐ ಕಿರಣ್‌ಕುಮಾರ್ ದೂರು ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.