ADVERTISEMENT

ಕುಂದು ಕೊರತೆ | ದಾವಣಗೆರೆ ಟಿ.ಸಿ: ಗಿಡ, ಬಳ್ಳಿಗಳ ಕತ್ತರಿಸಿ

​ಪ್ರಜಾವಾಣಿ ವಾರ್ತೆ
Published 10 ಜುಲೈ 2025, 4:34 IST
Last Updated 10 ಜುಲೈ 2025, 4:34 IST
ಕಡರನಾಯ್ಕನಹಳ್ಳಿ ಸಮೀಪದ ಹಿಂಡಸಘಟ್ಟ ಕ್ಯಾಂಪಿನ ಬಳಿಯ ವಿದ್ಯುತ್ ಪರಿವರ್ತಕಕ್ಕೆ ಹಬ್ಬಿದ ಬಳ್ಳಿಗಳು, ಗಿಡಗಂಟಿಗಳು
ಕಡರನಾಯ್ಕನಹಳ್ಳಿ ಸಮೀಪದ ಹಿಂಡಸಘಟ್ಟ ಕ್ಯಾಂಪಿನ ಬಳಿಯ ವಿದ್ಯುತ್ ಪರಿವರ್ತಕಕ್ಕೆ ಹಬ್ಬಿದ ಬಳ್ಳಿಗಳು, ಗಿಡಗಂಟಿಗಳು   

ಕಡರನಾಯ್ಕನಹಳ್ಳಿ: ಸಮೀಪದ ಹಿಂಡಸಘಟ್ಟ ಕ್ಯಾಂಪಿನ ಬಳಿ ಇರುವ ವಿದ್ಯುತ್ ಪರಿವರ್ತಕವು (ಟಿ.ಸಿ) ಗಿಡಗಳು, ಬಳ್ಳಿಗಳಿಂದ ಆವೃತವಾಗಿದ್ದು, ಅಪಾಯಕ್ಕೆ ಆಹ್ವಾನ ನೀಡುವಂತಿದೆ. 

ಹಸಿರನ್ನೇ ಹೊದ್ದು ಮಲಗಿರುವ ವಿದ್ಯುತ್ ಪರಿವರ್ತಕದಿಂದ ಸ್ಥಳೀಯರಿಗೆ ಅಪಾಯ ಎದುರಾಗಿದೆ. ಅದರ ಬಳಿ ಹುಲ್ಲು ತಿನ್ನಲು ಜಾನುವಾರುಗಳು ತೆರಳುವ ಕಾರಣ ಅವಘಡ ಸಂಭವಿಸುವ ಸಾಧ್ಯತೆ ಇದೆ. 

ಬೆಸ್ಕಾಂ ಸಿಬ್ಬಂದಿಯು ವಿದ್ಯುತ್ ಪರಿವರ್ತಕವನ್ನು ಸುತ್ತುವರಿದಿರುವ ಗಿಡ, ಬಳ್ಳಿಗಳನ್ನು ಕೂಡಲೇ ಕತ್ತರಿಸಬೇಕಿದೆ. 

ADVERTISEMENT

-ಎಂ.ಎಚ್.ರಾಮನಗೌಡ, ರಾಮಾನಾಯ್ಕ, ಎ.ಕೆ.ಚೌಡಪ್ಪ, ಸ್ಥಳೀಯರು

ತ್ಯಾವಣಿಗೆ: ಎಟಿಎಂ ದುರಸ್ತಿಪಡಿಸಿ

ತ್ಯಾವಣಿಗೆ: ಗ್ರಾಮದ ರಾಷ್ಟ್ರೀಕೃತ ಯೂನಿಯನ್ ಬ್ಯಾಂಕ್‌ನ ಎಟಿಎಂ ಬಂದ್ ಆಗಿ 1 ತಿಂಗಳು ಕಳೆದರೂ, ದುರಸ್ತಿಯಾಗಿಲ್ಲ. ಇದರಿಂದ ಗ್ರಾಹಕರು ಎಟಿಎಂ ಬಳಿ ಬಂದು ನಿರಾಶೆಯಿಂದ ಮರಳುತ್ತಿದ್ದಾರೆ. ಬ್ಯಾಂಕ್ ಅಧಿಕಾರಿಗಳು ಎಟಿಎಂ ದುರಸ್ತಿಗೆ ಮುಂದಾಗುತ್ತಿಲ್ಲ. 

ಬ್ಯಾಂಕ್‌ನಲ್ಲಿ ಯಾವಾಗಲೂ ಜನಜಂಗುಳಿ ಇರುತ್ತದೆ. ಇದರಿಂದಾಗಿ ಖಾತೆಯಿಂದ ಹಣ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಗ್ರಾಮದಲ್ಲಿ ಯೂನಿಯನ್ ಬ್ಯಾಂಕ್ ಖಾತೆದಾರರೇ ಹೆಚ್ಚಾಗಿದ್ದರೂ, ಎಟಿಎಂ ಸೇವೆ ಮಾತ್ರ ಸರಿಯಾಗಿಲ್ಲ. 

ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಕೂಡಲೇ ಎಟಿಎಂ ದುರಸ್ತಿಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು.

-ಪ್ರಸನ್ನ, ರವಿ, ರಾಜು, ಸುರೇಶ್, ರೇಣುಕಾ, ದಾದಾಪೀರ್, ಗ್ರಾಮಸ್ಥರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.