ADVERTISEMENT

ಅಂಗನವಾಡಿಯಲ್ಲಿ ಗರ್ಭಿಣಿಯರಿಗೆ ಸೀಮಂತ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2019, 15:57 IST
Last Updated 12 ಸೆಪ್ಟೆಂಬರ್ 2019, 15:57 IST
ದಾವಣಗೆರೆ ಬಾಷಾನಗರ ಅಂಗನವಾಡಿ ‘ಎ’ ಶಾಲೆಯಲ್ಲಿ ಗರ್ಭಿಣಿಯರಿಗೆ ಸೀಮಂತ ಕಾರ್ಯ ನಡೆಸಿ ಉಡಿ ತುಂಬಲಾಯಿತು
ದಾವಣಗೆರೆ ಬಾಷಾನಗರ ಅಂಗನವಾಡಿ ‘ಎ’ ಶಾಲೆಯಲ್ಲಿ ಗರ್ಭಿಣಿಯರಿಗೆ ಸೀಮಂತ ಕಾರ್ಯ ನಡೆಸಿ ಉಡಿ ತುಂಬಲಾಯಿತು   

ದಾವಣಗೆರೆ: ಬಾಷಾನಗರ ಅಂಗನವಾಡಿ ‘ಎ’ ಶಾಲೆಯಲ್ಲಿ ಗರ್ಭಿಣಿಯರಿಗೆ ಸೀಮಂತ ಕಾರ್ಯ ನಡೆಸಿ ಉಡಿ ತುಂಬಲಾಯಿತು.

ಇಲ್ಲಿನ ಏಳು ಅಂಗನವಾಡಿ ಕೇಂದ್ರಗಳ ವ್ಯಾಪ್ತಿಯ 14 ಮಂದಿ ಗರ್ಭಿಣಿಯರಿಗೆ ಬ್ಲೌಸ್ ಪೀಸ್, ಬಳೆ, ಹೂವನ್ನು ನೀಡಿ ಸೀಮಂತ ಮಾಡಿ ಬಾಣಂತಿಯರಿಗೆ ಅನ್ನ ಪ್ರಾಶಣ ನೀಡಲಾಯಿತು.

ಈ ವೇಳೆ ಅಂಗನವಾಡಿ ಶಾಲಾ ವಿಭಾಗದ ಮೇಲ್ವಿಚಾರಕಿ ಜ್ಯೋತಿ ಪಾಟೀಲ್, ಬಾಷಾನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಗೀತಾ, ಅಂಗನವಾಡಿ ಶಿಕ್ಷಕಿಯರಾದ ಬಿ.ಸರಸ್ವತಿ, ಹೀನ ಕೌಸರ್, ಇಂದ್ರ, ಸೀಮಾ, ಶಾಹಿಸ್ತಾ, ಶಾನಾಜ್, ಬೀಬಿಜಾನ್, ಲೀಲಾ ಆರ್, ಅಸ್ಮತ್ ಉನ್ನಿಸಾ, ಗೀತಾ, ಲತಾ, ತಿಪ್ಪೀರಮ್ಮ, ರೇಖಾ, ಆಶಾ ಕಾರ್ಯಕರ್ತೆಯರು ಮತ್ತು ಎ.ಎನ್.ಎಂ ತಂಡ ಸ್ಥಳೀಯ ಮುಖಂಡ ರಹಮತುಲ್ಲಾ ಅವರೂ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.