ADVERTISEMENT

ಆತ್ಮಹತ್ಯೆಗೆ ಯತ್ನಿಸಿದ ತಾಯಿ, ಮಗನ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2021, 3:16 IST
Last Updated 12 ಜನವರಿ 2021, 3:16 IST

ಹರಿಹರ: ಕೌಟುಂಬಿಕ ಸಮಸ್ಯೆಯಿಂದ ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿ ಹಾಗೂ ಮಗುವನ್ನು112 ಇಆರ್‌ಎಸ್‌ಎಸ್‌ (ಎಮರ್ಜೆನ್ಸಿ ರೆಸ್ಪಾನ್ಸ್‌ ಸಪೋರ್ಟ್‌ ಸಿಸ್ಟಂ) ಸಿಬ್ಬಂದಿ ರಕ್ಷಿಸಿದ್ದಾರೆ.

ಹೊಳಲ್ಕೆರೆ ತಾಲ್ಲೂಕಿನ ಗುಂಡಿಮಡು ಗ್ರಾಮದ ನಿವಾಸಿ ಅಶ್ವಿನಿ (28) ಆತ್ಮಹತ್ಯೆಗೆ ಯತ್ನಿಸಿದವರು. ಆರು ವರ್ಷದ ಮಗನೊಂದಿಗೆ ತಾಲ್ಲೂಕಿನ ಹಲಸಬಾಳುಸೋಮವಾರ ಸಂಜೆ ಸೇತುವೆ ಬಳಿ ಬಂದಿದ್ದಾಗ ಅನುಮಾನಗೊಂಡ ಸ್ಥಳೀಯರಾದ ಹಲಸಬಾಳು ಬಾರಿಕೇರ ರೇವಣಪ್ಪ, ಪುಟಗನಾಳ್‌ನ ಶಂಕರಪ್ಪ ಎಂಬುವರು 112ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ತಕ್ಷಣ ಕಾರ್ಯ ಪ್ರವೃತ್ತರಾದ ಹೆಡ್ ಕಾನ್‌ಸ್ಟೆಬಲ್ ರಮೇಶ್, ವಾಹನ ಚಾಲಕ ಬಸವರಾಜ್ ಸ್ಥಳಕ್ಕೆ ತೆರಳಿ ತಾಯಿ-ಮಗನನ್ನು ರಕ್ಷಣೆ ಮಾಡಿ ಠಾಣೆಗೆ ಕರೆತಂದಿದ್ದಾರೆ. ನಂತರ ಸಂಬಂಧಿಗಳನ್ನು ಕರೆಸಿ ಸಮಾಧಾನಪಡಿಸಿ ಕಳುಹಿಸಿಕೊಡ ಲಾಗಿದೆ. ಕುಟುಂಬಸ್ಥರು ಭಾನುವಾರ ಉಕ್ಕಡಗಾತ್ರಿ ದೇವಸ್ಥಾನಕ್ಕೆ ಬಂದಿದ್ದಾಗ ಅಶ್ವಿನಿ ಮತ್ತು ಮಗ ನಾಪತ್ತೆಯಾಗಿದ್ದರು.

ADVERTISEMENT

ಹರಿಹರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.