ADVERTISEMENT

ಮಲೇಬೆನ್ನೂರು | ಮಳೆ: ಚಾಪೆ ಹಾಸಿದ ಭತ್ತ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2023, 5:47 IST
Last Updated 9 ನವೆಂಬರ್ 2023, 5:47 IST
ಮಲೇಬೆನ್ನೂರು ಸಮೀಪದ ಬೂದಿಹಾಳು ಹೊರವಲಯದಲ್ಲಿ ಮಳೆಗೆ ಭತ್ತದ ಬೆಳೆ ಚಾಪೆ ಹಾಸಿರುವುದು
ಮಲೇಬೆನ್ನೂರು ಸಮೀಪದ ಬೂದಿಹಾಳು ಹೊರವಲಯದಲ್ಲಿ ಮಳೆಗೆ ಭತ್ತದ ಬೆಳೆ ಚಾಪೆ ಹಾಸಿರುವುದು   

ಮಲೇಬೆನ್ನೂರು: ಹೋಬಳಿಯಲ್ಲಿ ಮಂಗಳವಾರ ರಾತ್ರಿ ಹಾಗೂ ಬುಧವಾರ ಉತ್ತಮ ಮಳೆಯಾಗಿದೆ. ಮಳೆಗೆ ಭತ್ತದ ಗದ್ದೆಗಳು ಚಾಪೆ ಹಾಸಿವೆ.

ಸ್ವಾತಿ ಮಳೆಗೆ ದೇವರಬೆಳೆಕೆರೆ ಪಿಕಪ್‌ ಭರ್ತಿಯಾಗಿದೆ. ಜಲಾಶಯದ ಗೇಟ್‌ಗಳಿಗೆ ಜಲಸಸ್ಯ ಅಡ್ಡವಾಗಿದ್ದು, ಹಿನ್ನೀರು ಭತ್ತದ ಗದ್ದೆಗಳಿಗೆ ನುಗ್ಗಿದೆ.

ಜಲಾಶಯದ ಹಿಂಭಾಗದಲ್ಲಿ ಅಪಾರ ಪ್ರಮಾಣದ ಜಲಸಸ್ಯ ಶ್ಯಾಗಲೆ ಹಳ್ಳ, ಸೂಳೆಕೆರೆ, ಕೂಲಂಬಿ, ಹದಡಿ ಭಾಗದ ಹಳ್ಳಗಳಿಂದ ಹರಿದುಬರುತ್ತಿವೆ. 

ADVERTISEMENT

ಕರ್ನಾಟಕ ನೀರಾವರಿ ನಿಗಮದ ಕಾರ್ಮಿಕರು ಜಲಸಸ್ಯ ತೆರವು ಕಾರ್ಯದಲ್ಲಿ ನಿರತರಾಗಿದ್ದರು. ಆದರೆ ಹೆಚ್ಚಿನ ಪ್ರಮಾಣದಲ್ಲಿ ಜಲಸಸ್ಯ ಸಂಗ್ರಹವಾಗಿರುವುದರಿಂದ ನೀರಿನ ಹರಿವಿಗೆ ಅಡ್ಡಿಯಾಗಿದೆ.

ಜಲಾಶಯಕ್ಕೆ ನೀರು ಹರಿದು ಬರುತ್ತಿರುವ ಕಾರಣ ಹಿನ್ನೀರಿನಲ್ಲಿ ನಿರ್ಮಾಣ ಹಂತದಲ್ಲಿದ್ದ ಸಂಕ್ಲೀಪುರ- ಮುಕ್ತೇನಹಳ್ಳಿ ರಸ್ತೆ ಜಲಾವೃತವಾಗಿದೆ. ನೂತನ ಸೇತುವೆ ನಿರ್ಮಾಣ ಮಾಡುತ್ತಿದ್ದ ಪಕ್ಕದ ಸರ್ವೀಸ್‌ ರಸ್ತೆ ಮುಳುಗಿದೆ.

ನೂರಾರು ಎಕರೆ ಪ್ರದೇಶ ಭತ್ತದ ಗದ್ದೆಗಳು ನೀರಿನಲ್ಲಿ ಮುಳುಗಿವೆ. ಭತ್ತದ ಬೆಳೆ ಶೀತ ಬಾಧೆಗೆ ಸಿಲುಕಿದೆ, ಬುಡ ಕೊಳೆತು ಹೋಗುತ್ತಿವೆ. ಈವರೆಗೂ ಯಾವೊಬ್ಬ ಸರ್ಕಾರಿ ಅಧಿಕಾರಿ, ಜನಪ್ರತಿನಿಧಿ ಸಮಸ್ಯೆ ಆಲಿಸಲು ಬಂದಿಲ್ಲ ಎಂದು ಸಂಕ್ಲೀಪುರದ ರೈತರಾದ ನಾಗೇಂದ್ರಪ್ಪ ಹಾಗೂ ರಾಜು ಬೇಸರ ವ್ಯಕ್ತಪಡಿಸಿದರು.

ಜಲಸಸ್ಯ ತೆರವು ಮಾಡುತ್ತಿದ್ದ ಕಾರ್ಮಿಕರು ಯಾವುದೇ ತರಹದ ರಕ್ಷಣಾ ಮುನ್ನೆಚ್ಚರಿಕೆ ವಹಿಸಿದೆ ಕೆಲಸ ನಿರ್ವಹಿಸುತ್ತಿದ್ದರು. ಸಮೀಪದ ಬೂದಿಹಾಳು ಹೊರವಲಯದಲ್ಲಿ ಕಟಾವಿಗೆ ಸಿದ್ಧವಾಗುತ್ತಿದ್ದ ಭತ್ತದ ಗದ್ದೆ ಚಾಪೆ ಹಾಸಿವೆ.

ಭದ್ರಾ ಅಚ್ಚುಕಟ್ಟಿನ ಭತ್ತದ ಬೆಳೆಗಾರರಲ್ಲಿ ಮಳೆ ನೆಮ್ಮದಿ ಮೂಡಿಸಿದೆ. ಆದರೆ ಡಿಬಿ ಕೆರೆ ಪಿಕಪ್‌ ಹಿಂಭಾಗದ ರೈತರಿಗೆ ಸಂಕಷ್ಟ ಎದುರಾಗಿದೆ. 

ಮಲೇಬೆನ್ನೂರು ಸಮೀಪದ ದೇವರಬೆಳೆಕೆರೆ ಪಿಕಪ್‌ ಉಕ್ಕಿ ಹರಿಯುತ್ತಿದ್ದು ಹಿನ್ನೀರಿನಲ್ಲಿ ಸಂಕ್ಲೀಪುರ- ಮುಕ್ತೇನಹಳ್ಳಿ ರಸ್ತೆ ಜಲಾವೃತವಾಗಿರುವುದು
ಮಲೇಬೆನ್ನೂರು ಸಮೀಪದ ದೇವರಬೆಳೆಕೆರೆ ಪಿಕಪ್‌ ಉಕ್ಕಿ ಹರಿಯುತ್ತಿದ್ದು, ಹಿನ್ನೀರು ಭತ್ತದ ಗದ್ದೆಗಳಿಗೆ ನುಗ್ಗಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.