
ನ್ಯಾಮತಿ: ತಾಲ್ಲೂಕಿನ ಚೀಲೂರು ಗ್ರಾಮದ ಕೆರೆ ಏರಿಯ ಮೇಲೆ ಹೊನ್ನಾಳಿ- ಶಿವಮೊಗ್ಗ ರಸ್ತೆಯಲ್ಲಿ ಮಂಗಳವಾರ ಬೈಕ್, ಕಾರು ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟಿದ್ದಾರೆ.
ಚಿ.ಕಡದಕಟ್ಟೆ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ಮರಿಗೊಂಡನಹಳ್ಳಿ ಗ್ರಾಮದ ಎಚ್.ಎಸ್. ಸಂತೋಷ (34) ಮೃತಪಟ್ಟವರು.
ಗ್ರಾಮ ಪಂಚಾಯಿತಿ ಕೆಲಸದ ನಿಮಿತ್ತ ಚೀಲೂರು ಗ್ರಾಮಕ್ಕೆ ಹೋಗಿ ಸ್ವಂತ ಊರು ಮರಿಗೊಂಡನಹಳ್ಳಿ ಗ್ರಾಮಕ್ಕೆ ವಾಪಸ್ ಬರುವಾಗ ಹೊನ್ನಾಳಿ ಕಡೆಯಿಂದ ಶಿವಮೊಗ್ಗ ಮಾರ್ಗವಾಗಿ ಬಂದ ಕಾರು ಬೈಕ್‌ಗೆ ಡಿಕ್ಕಿ ಹೊಡೆದಿದ್ದರಿಂದ ಸಂತೋಷ ಗಂಭೀರವಾಗಿ ಗಾಯಗೊಂಡು ರಕ್ತಸ್ರಾವವಾಗಿತ್ತು. ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸಲಿಲ್ಲ.
ಮೃತರ ಪತ್ನಿ ನ್ಯಾಮತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಆಗ್ರಹ: ಚೀಲೂರು - ಹೊನ್ನಾಳಿ ಮಾರ್ಗದ ಕೆರೆ ಏರಿಯ ಬಳಿ ರಸ್ತೆ ದುರಸ್ತಿಗೆ ಕಾಮಗಾರಿ ನಡೆಯುತ್ತಿದ್ದು, ವಾಹನಗಳು ಚಲಾಯಿಸಿದಾಗ ರಸ್ತೆಯ ಮೇಲಿನ ಮಣ್ಣಿನ ದೂಳು ಎದ್ದು ಸವಾರರಿಗೆ ಹಿಂದೆ– ಮುಂದೆ ಬರುವ ವಾಹನಗಳು ಕಾಣದಂತೆ ದೂಳು ಆವರಿಸುತ್ತದೆ. ಇದರಿಂದ ಅಪಘಾತಗಳು ಆಗುತ್ತಿವೆ. ಸಂಬಂಧಪಟ್ಟ ಅಧಿಕಾರಿಗಳು ಕಾಮಗಾರಿ ಶೀಘ್ರವಾಗಿ ಪೂರ್ಣಗೊಳಿಸುವಂತೆ ಡಿಎಸ್‌ಎಸ್ ಮುಖಂಡ ಎ.ಕೆ.ಕುಮಾರ, ಸಾಮಾಜಿಕ ಕಾರ್ಯಕರ್ತ ಪುರುವಂತರ ಪರಮೇಶ್ವರಪ್ಪ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.