
ದಾವಣಗೆರೆ: ದಾಳಿ ನಡೆಸಿ ಮಹಿಳೆಯ ಸಾವಿಗೆ ಕಾರಣವಾಗಿದ್ದ ರಾಟ್‌ವೈಲರ್ ತಳಿಯ ಎರಡು ಶ್ವಾನಗಳ ಮಾಲೀಕನನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ದೇವರಾಜ ಅರಸು ಬಡಾವಣೆಯ ನಿವಾಸಿ ಶೈಲೇಶಕುಮಾರ್ ಪಿ. ಬಂಧಿತ. ಈತ ನಗರದ ಚಿತ್ರಮಂದಿರವೊಂದರ ಮಾಲೀಕರ ಅಳಿಯ. ‘ಒಟ್ಟು 3 ನಾಯಿ ಸಾಕಿದ್ದು, ಆಕ್ರಮಣಕಾರಿಯಾಗಿದ್ದ 2 ನಾಯಿಗಳು ಶೈಲೇಶಕುಮಾರ್ ಹಾಗೂ ಅವರ ಮಾವನ ಮೇಲೆಯೇ 2–3 ಬಾರಿ ದಾಳಿ ನಡೆಸಿದ್ದವು. ಕಚ್ಚಿ ಗಾಯಗೊಳಿಸಿದ್ದವು.
ಇದರಿಂದ ಬೇಸತ್ತಿದ್ದ ಅವರು ಎರಡು ನಾಯಿಗಳನ್ನು ರಾತ್ರೋ ರಾತ್ರಿ ಆಟೊದಲ್ಲಿ ಸಾಗಿಸಿ ಹೊನ್ನೂರು ಗೊಲ್ಲರಹಟ್ಟಿ ಸಮೀಪ ಬಿಟ್ಟು ಬಂದಿದ್ದರು ಎಂದು ಗ್ರಾಮೀಣ ಠಾಣೆ ಪೊಲೀಸರು ಮಾಹಿತಿ ನೀಡಿದರು.
ಅನಿತಾ ಎಂಬುವರ ಮೇಲೆ ಈ ನಾಯಿಗಳು ತೀವ್ರ ದಾಳಿ ನಡೆಸಿದ್ದವು. ಗಂಭೀರವಾಗಿ ಗಾಯಗೊಂಡಿದ್ದ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಗ್ರಾಮಸ್ಥರು ಸೆರೆ ಹಿಡಿದಿದ್ದ ಈ ಶ್ವಾನಗಳು ಶನಿವಾರ ಮೃತಪಟ್ಟಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.