ADVERTISEMENT

ಮಹಿಳೆ ಜತೆ ಅಸಭ್ಯ ವರ್ತನೆ: ಗ್ರಾ.ಪಂ.ಕಂಪ್ಯೂಟರ್ ಆಪರೇಟರ್ ವಿರುದ್ಧ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2020, 6:35 IST
Last Updated 16 ಮಾರ್ಚ್ 2020, 6:35 IST
   

ದಾವಣಗೆರೆ: ತಾಲ್ಲೂಕಿನ ಹೊನ್ನೂರು ಗ್ರಾಮ ಪಂಚಾಯ್ತಿ ಕಾರ್ಯಾಲಯದ ಅಟೆಂಡರ್ ಜತೆಗೆ ಅಸಭ್ಯವಾಗಿ ವರ್ತಿಸಿ ಕಿರುಕುಳ ನೀಡುತ್ತಿದ್ದ ಕಂಪ್ಯೂಟರ್ ಆಪರೇಟರ್ ಮೇಲೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೆಂಕಟೇಶ್ ಎಂಬುವವನುಕಿರುಕುಳ ನೀಡಿದ ಆರೋಪಿ ಎಂದು ತಿಳಿದುಬಂದಿದೆ.

ಮಹಿಳೆ ಥಂಬ್ ನೀಡಲು ಬರುವಾಗೆಲ್ಲ ಮೈ ಕೈ ಹಿಡಿದು ಅಸಭ್ಯವಾಗಿ ವರ್ತಿಸುವ, ಮಹಿಳೆ ಪ್ರತಿರೋಧ ತೋರುವ ದೃಶ್ಯಗಳು ಕಚೇರಿಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ.

ADVERTISEMENT

ಕಳೆದ ನವೆಂಬರ್ ಮತ್ತು ಫೆಬ್ರುವರಿಯ ನಾಲ್ಕು ವಿಡಿಯೊ ಫೂಟೇಜ್ ನೀಡಿ ಮಹಿಳೆ ದೂರು ನೀಡಿದ್ದಾರೆ. ಆರೋಪಿ ವೆಂಕಟೇಶ್ ತಪ್ಪಿಸಿಕೊಂಡಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.