ADVERTISEMENT

ಸಾಸ್ವೆಹಳ್ಳಿ ಪಿಎಸಿಎಸ್‌ ಅಧ್ಯಕ್ಷರಾಗಿ ರುದ್ರನಗೌಡ ಆಯ್ಕೆ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2025, 8:03 IST
Last Updated 7 ನವೆಂಬರ್ 2025, 8:03 IST
ಸಾಸ್ವೆಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಜಿ. ರುದ್ರನಗೌಡ ಅವರನ್ನು ನಿರ್ದೇಶಕರು ಅಭಿನಂದಿಸಿದರು
ಸಾಸ್ವೆಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಜಿ. ರುದ್ರನಗೌಡ ಅವರನ್ನು ನಿರ್ದೇಶಕರು ಅಭಿನಂದಿಸಿದರು   

ಸಾಸ್ವೆಹಳ್ಳಿ: ಇಲ್ಲಿನ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜಿ. ರುದ್ರನಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ನವೀನ್‌ಕುಮಾರ್ ಘೋಷಿಸಿದರು.

ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷೆ ರತ್ನಮ್ಮ, ಉಪಾಧ್ಯಕ್ಷ ಶಿವಮೂರ್ತಪ್ಪ ಟಿ., ಸಂಘದ ನಿರ್ದಶಕರಾದ ಟಿ.ಎಂ. ಹಾಲೇಶ್ ಕುಮಾರ್, ಬಿ.ವಿ. ಹಾಲೇಶ್, ಕೆ.ಎಸ್. ಮಹೇಶ್ವರಪ್ಪ, ಕೃಷ್ಣಮುರ್ತಿ ಎಸ್.ಎಚ್, ಎನ್.ಆರ್. ಸಿದ್ದಪ್ಪ, ಯಶೋಧಮ್ಮ, ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಬಸವರಾಜ್ ಬಿ.ಬಿ, ದಾವಣಗೆರೆ ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಎಸ್ ಸುರೇಂದ್ರ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.