ADVERTISEMENT

ಮಣ್ಣುಮುಕ್ಕ ಹಾವು ಮಾರಾಟ: ಒಬ್ಬನ ಬಂಧನ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2020, 2:52 IST
Last Updated 5 ಡಿಸೆಂಬರ್ 2020, 2:52 IST
ದಾವಣಗೆರೆಯ ಬೇತೂರು ರಸ್ತೆಯಲ್ಲಿ ಗುರುವಾರ ವಶಪಡಿಸಿಕೊಂಡ ಮಣ್ಣುಮುಕ್ಕ ಹಾವು.
ದಾವಣಗೆರೆಯ ಬೇತೂರು ರಸ್ತೆಯಲ್ಲಿ ಗುರುವಾರ ವಶಪಡಿಸಿಕೊಂಡ ಮಣ್ಣುಮುಕ್ಕ ಹಾವು.   

ದಾವಣಗೆರೆ: ಇಲ್ಲಿನಬೇತೂರು ರಸ್ತೆಯಲ್ಲಿ ಗುರುವಾರ ಮಣ್ಣುಮುಕ್ಕ ಹಾವನ್ನು ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಒಬ್ಬನನ್ನು ಬಂಧಿಸಿ ಹಾವನ್ನು ವಶಪಡಿಸಿಕೊಂಡಿದ್ದಾರೆ.

ಹರಪನಹಳ್ಳಿ ತಾಲ್ಲೂಕಿನ ಅರಸೀಕೆರೆ ಗ್ರಾಮದ ಮಂಜಪ್ಪ ಬಂಧಿತ. ಕಳೆದ ತಿಂಗಳು ಹರಿಹರದ ವಸತಿಗೃಹವೊಂದರಲ್ಲಿ ಮಾರಾಟ ಮಾಡುತ್ತಿದ್ದ ಮಣ್ಣುಮುಕ್ಕ ಹಾವನ್ನು ವಶಪಡಿಸಿಕೊಳ್ಳಲಾಗಿತ್ತು. ಹಾವನ್ನು ನ್ಯಾಯಾಧೀಶರ ಮುಂದೆ ತಂದು, ಕಾಡಿಗೆ ಬಿಡಲಾಗುತ್ತದೆ. ತನಿಖೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಈ ಹಾವು ದೈವಿ ಸ್ವರೂಪವಾಗಿದ್ದು, ಈ ಹಾವಿನಿಂದ ನಿಧಿ ಇರುವ ಜಾಗ ಕಂಡುಹಿಡಿಯುಬಹುದು. ಅಲ್ಲದೇ ವ್ಯವಹಾರದ ಸ್ಥಳದಲ್ಲಿ ಇದನ್ನು ಇಟ್ಟುಕೊಂಡರೆ ಆರ್ಥಿಕ ಸಂಪತ್ತು ಹೆಚ್ಚುತ್ತದೆ ನಂಬಿಸಿ ಮಾರಾಟ ಮಾಡಲಾಗುತ್ತಿದ್ದು, ಈ ಕಾರಣಕ್ಕೆ ಮಣ್ಣುಮುಕ್ಕ ಹಾವಿಗೆ ಬೇಡಿಕೆ ಹೆಚ್ಚಿದೆ’ ಎನ್ನುತ್ತಾರೆ
ಅಧಿಕಾರಿಗಳು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.