
ಪ್ರಜಾವಾಣಿ ವಾರ್ತೆ
ಸಾವು
ಸಾಂದರ್ಭಿಕ ಚಿತ್ರ
ಸಂತೇಬೆನ್ನೂರು: ಗ್ರಾಮದ ಹೊರವಲಯದ ರಾಜ್ಯ ಹೆದ್ದಾರಿಯಲ್ಲಿ ಶುಕ್ರವಾರ ಕಲ್ಲು ಕಂಬಕ್ಕೆ ಬೈಕ್ ಡಿಕ್ಕಿಯಾಗಿ ಹಿಂಬದಿ ಸವಾರ ಮೃತಪಟ್ಟಿದ್ದಾರೆ.
ಮೆದಿಕೆರೆ ನಿವಾಸಿ ವೀರಾಚಾರ್ (52) ಮೃತರು.
ಬೈಕ್ ಚಲಾಯಿಸುತ್ತಿದ್ದ ಸಂತೇಬೆನ್ನೂರಿನ ಲಿಂಗರಾಜು ಅವರ ತಲೆಗೆ ತೀವ್ರ ಪೆಟ್ಟಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಯ ಆಸ್ಪತ್ರೆಗೆ ಸೇರಿಸಲಾಗಿದೆ.
ಚನ್ನಗಿರಿಯಿಂದ ಸಂತೇಬೆನ್ನೂರಿಗೆ ಬರುತ್ತಿದ್ದಾಗ ಸವಾರನ ನಿಯಂತ್ರಣ ತಪ್ಪಿದ ಬೈಕ್, ಪಕ್ಕದ ಹೊಲದಲ್ಲಿದ್ದ ಕಲ್ಲುಕಂಬಕ್ಕೆ ಡಿಕ್ಕಿ ಹೊಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.