ಸಾಸ್ವೆಹಳ್ಳಿ: ಗ್ರಾಮ ಪಂಚಾಯಿತಿಯ 4ನೇ ವಾರ್ಡ್‌ನಲ್ಲಿ ಲತಾ ಹಾಲೇಶಪ್ಪ ಎಂಬವರ ಮನೆಯಲ್ಲಿ ದಾರದ ರೀತಿ ಕಾಣುವ ಹುಳವೊಂದು ಪತ್ತೆಯಾಗಿದೆ.
ಅಂದಾಜು 8 ಇಂಚು ಉದ್ದದ ಕಪ್ಪುಬಣ್ಣದ ಸರಿಸೃಪದ ರೀತಿಯಲ್ಲಿ ಕಾಣುವ ವಿಚಿತ್ರ ಹುಳವನ್ನು ಕಂಡು ಕೇರಿಯ ಜನ ಅಚ್ಚರಿ ವ್ಯಕ್ತಪಡಿಸಿದರು. ಮನೆಯ ಮುಂದಿರುವ ನಳದ ನೀರಿನಿಂದ ಇದು ಹರಿದು ಬಂದಿರಬಹುದು ಎಂದು ಮನೆಯವರು ಅಂದಾಜಿಸಿದ್ದಾರೆ. ಮನೆಯ ಸಮೀಪ ಹೂವಿನ ಗಿಡಗಳು ಹಾಗೂ ಚರಂಡಿ ಇದ್ದು, ಅಲ್ಲಿಂದಲೂ ಹುಳ ಬಂದಿರಬಹುದು ಎನ್ನಲಾಗಿದೆ.
ಸ್ಥಳಕ್ಕೆ ಆಗಮಿಸಿದ ಗ್ರಾಮ ಪಂಚಾಯಿತಿ ಪಿಡಿಒ ಹನುಮಂತ ನಾಯ್ಕ ಪರಿಶೀಲಸಿದರು. ಭಾನುವಾರವೂ ನಳದ ನೀರನ್ನು ಪರಿಶೀಲಿಸಲಾಗುವುದು ಎಂದು ಅವರು ತಿಳಿಸಿದರು.
ಮುಂಜಾಗೃತ ಕ್ರಮವಾಗಿ ಪಂಚಾಯಿತಿ ವ್ಯಾಪ್ತಿಯ ನೀರಿನ ಎಲ್ಲ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸಲು ಸೂಚಿಸಲಾಗಿದೆ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.