ADVERTISEMENT

ಗಡುವು ಮುಗಿದ ನಂತರ ಮುಂದಿನ ಹೋರಾಟ: ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2021, 16:37 IST
Last Updated 1 ಫೆಬ್ರುವರಿ 2021, 16:37 IST
ಸತೀಶ್‌ ಜಾರಕಿಹೊಳಿ
ಸತೀಶ್‌ ಜಾರಕಿಹೊಳಿ   

ದಾವಣಗೆರೆ: ‘ಮೀಸಲಾತಿ ಹೆಚ್ಚಳಕ್ಕೆ ಗಡುವು ಕೊಟ್ಟಿದ್ದೇವೆ.ಗಡುವು ಮುಗಿದ ನಂತರ ಮುಂದಿನ ಹೋರಾಟ ನಿರ್ಧರಿಸುತ್ತೇವೆ.ವಾಲ್ಮೀಕಿ‌ ಜಾತ್ರೆಯಲ್ಲೂ ಈ ಕುರಿತು ಒತ್ತಡ ಹಾಕುತ್ತೇವೆ’ ಎಂದು ಶಾಸಕ ಸತೀಶ್ ಜಾರಕಿಹೊಳಿಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಹರಿಹರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಶೋಷಿತರಿಗೆ ನ್ಯಾಯ ಸಿಗುವುದು ಕಷ್ಟ. ಹೀಗಾಗಿಯೇ ಹೋರಾಟ ಮಾಡುತ್ತಲೇ ಬಂದಿ‌ದ್ದೇವೆ’ ಎಂದರು.

ಬೆಳಗಾವಿ ಲೋಕಸಭಾ ಚುನಾವಣೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಪಕ್ಷ ಬಯಸಿದರೆ ಸ್ಪರ್ಧೆಗೆ ಸಿದ್ಧ.ನಾನೇ ಅಭ್ಯರ್ಥಿ ಎಂದು ಇನ್ನೂ ಅಂತಿಮವಾಗಿಲ್ಲ. ಈ ಬಗ್ಗೆ ಹಲವು ಹಂತದ ಸಭೆ ನಡೆದಿದೆ.ಪಕ್ಷ ಹೇಳಿದರೆ ನಿಲ್ಲುತ್ತೇನೆ’ ಎಂದರು.

ADVERTISEMENT

‘ಕೇಂದ್ರ ಬಜೆಟ್‌ನಲ್ಲಿಹೊಸದೇನೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ.ಕೋವಿಡ್ ಸಮಯದಲ್ಲಿ ಆಶ್ವಾಸನೆ ಕೊಟ್ಟಿದ್ದ ₹ 20 ಲಕ್ಷ ಕೋಟಿ ಎಲ್ಲಿ ಹೋಯಿತು. ಬದಲಾವಣೆ ಬಜೆಟ್ ಇವರಿಂದ ಸಿಗುವುದು ಕಷ್ಟ.ಪೆಟ್ರೋಲ್ ಬೆಲೆ ಏರಿಕೆ ಬಗ್ಗೆ ಬಿಜೆಪಿಯ ಯಾರೊಬ್ಬರೂಮಾತನಾಡುತ್ತಿಲ್ಲ.ರಾಜ್ಯಕ್ಕೆ ಬಜೆಟ್‌ನಲ್ಲಿ ಅನ್ಯಾಯ ಆಗಿದೆ’ ಎಂದು ದೂರಿದರು.

ವಾಲ್ಮೀಕಿ ಜಾತ್ರೆಯಲ್ಲಿ ಬೇಡಿಕೆ ಈಡೇರಿಕೆ ವಿಶ್ವಾಸ: ‘ವಾಲ್ಮೀಕಿ ಜಾತ್ರೆಯಲ್ಲಿ ವಾಲ್ಮೀಕಿ ಸಮಾಜದ ಮೀಸಲಾತಿ ಹೆಚ್ಚಳ ಬೇಡಿಕೆ ಈಡೇರುವ ವಿಶ್ವಾಸ ಇದೆ. ಜಾತ್ರೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನಮ್ಮ ಸಮಾಜಕ್ಕೆ ನ್ಯಾಯ ಒದಗಿಸಲಿದ್ದಾರೆ’ ಎಂದುಪ್ರಸನ್ನಾನಂದಪುರಿ ಸ್ವಾಮೀಜಿವಿಶ್ವಾಸ ವ್ಯಕ್ತಪಡಿಸಿದರು.

‘ಸರ್ಕಾರ ನಾಗಮೋಹನ್ ದಾಸ್ ಆಯೋಗ ಹಾಗೂ ಉಪಸಮಿತಿ ಮಾಡಿ ಶೇ 90 ರಷ್ಟು ಕೆಲಸ ಮುಗಿಸಿದೆ. ಶೇ7.5 ಮೀಸಲಾತಿ ಬಾಕಿ ಇದೆ. ಶೀಘ್ರ ನೀಡಲಿ’ ಎಂದು ‌ಸ್ವಾಮೀಜಿ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.