ADVERTISEMENT

ಅಧಿಕ ಬೆಲೆಗೆ ಮಾರಾಟ: ಸಿಗರೇಟ್‌ ವಶ

​ಪ್ರಜಾವಾಣಿ ವಾರ್ತೆ
Published 7 ಜನವರಿ 2022, 4:52 IST
Last Updated 7 ಜನವರಿ 2022, 4:52 IST
ಎಂಆರ್‌ಪಿಗಿಂತ ಅಧಿಕ ದರಕ್ಕೆ ಸಿಗರೇಟ್‌ ಮಾರಾಟ ಮಾಡಲಾಗುತ್ತಿದೆ ಎಂಬ ದೂರುಗಳು ಬಂದ ಕಾರಣ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಅಧಿಕಾರಿಗಳು ವಿವಿಧ ಅಂಗಡಿಗಳ ತಪಾಸಣೆ ನಡೆಸಿದರು
ಎಂಆರ್‌ಪಿಗಿಂತ ಅಧಿಕ ದರಕ್ಕೆ ಸಿಗರೇಟ್‌ ಮಾರಾಟ ಮಾಡಲಾಗುತ್ತಿದೆ ಎಂಬ ದೂರುಗಳು ಬಂದ ಕಾರಣ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಅಧಿಕಾರಿಗಳು ವಿವಿಧ ಅಂಗಡಿಗಳ ತಪಾಸಣೆ ನಡೆಸಿದರು   

ದಾವಣಗೆರೆ: ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಾರ್ವಜನಿಕರ ದೂರನ್ನು ಆಧರಿಸಿ ಸಿಗರೇಟ್ ಪೊಟ್ಟಣಗಳನ್ನು ಎಂಆರ್‌ಪಿಗಿಂತಲೂ ಅಧಿಕ ಬೆಲೆಗೆ ಮಾರಾಟ ಮಾಡುವ ಹಾಗೂ ಕಡ್ಡಾಯ ಘೋಷಣೆಗಳಿಲ್ಲದ ಸಿಗರೇಟ್‌ಗಳನ್ನು ಮಾರಾಟ ಮಾಡುವುದನ್ನು ಕಾನೂನು ಮಾಪನ ಶಾಸ್ತ್ರ ಇಲಾಖೆ ಪತ್ತೆ ಹಚ್ಚಿದೆ.

ಜಿಲ್ಲೆಯ 19 ಅಂಗಡಿಗಳನ್ನು ತಪಾಸಣೆ ನಡೆಸಲಾಯಿತು. 3 ಕಡೆಗಳಲ್ಲಿ ಈ ರೀತಿ ಅಧಿಕ ಬೆಲೆಗೆ ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ. ಆ ವ್ಯಾಪಾರಿಗಳ ಮೇಲೆ ಕಾನೂನು ಮಾಪನಶಾಸ್ತ್ರ ಪೊಟ್ಟಣ ಸಾಮಗ್ರಿ ನಿಯಮಗಳ ಅಡಿಯಲ್ಲಿ ಮೊಕದ್ದಮೆ ಹೂಡಲಾಗಿದೆ ಎಂದು ಕಾನೂನು ಮಾಪನ ಶಾಸ್ತ್ರ ಸಹಾಯಕ ನಿಯಂತ್ರಕ ಎಚ್.ಎಸ್. ರಾಜು ತಿಳಿಸಿದ್ದಾರೆ.

ಸಿಗರೇಟ್‌ ಮಾತ್ರವಲ್ಲ ಇತರೆ ಪೊಟ್ಟಣ ಸಾಮಗ್ರಿಗಳನ್ನು ಕೂಡ ಮುದ್ರಿತ ಎಂಆರ್‌ಪಿಗಿಂತಲೂ ಅಧಿಕ ಬೆಲೆಗೆ ಮಾರಾಟ ಮಾಡುವುದು ದಂಡಾರ್ಹ ಅಪರಾಧ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.