ADVERTISEMENT

ಆಡಿ ನಲಿದ ಹಿರಿಯ ಜೀವಗಳು...

ವಿಶ್ವ ಹಿರಿಯ ನಾಗರಿಕರ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2018, 18:43 IST
Last Updated 9 ಸೆಪ್ಟೆಂಬರ್ 2018, 18:43 IST
ದಾವಣಗೆರೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನು ಮೇಯರ್‌ ಶೋಭಾ ಪಲ್ಲಾಗಟ್ಟೆ ಉದ್ಘಾಟಿಸಿದರು
ದಾವಣಗೆರೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನು ಮೇಯರ್‌ ಶೋಭಾ ಪಲ್ಲಾಗಟ್ಟೆ ಉದ್ಘಾಟಿಸಿದರು   

ದಾವಣಗೆರೆ: ನಗರದ ಬಾಪೂಜಿ ಪ್ರೌಢಶಾಲೆ ಆವರಣದಲ್ಲಿ ಭಾನುವಾರ ಸಂಭ್ರಮದಿಂದ ವಿಶ್ವ ಹಿರಿಯ ನಾಗರಿಕರ ದಿನವನ್ನು ಆಚರಿಸಲಾಯಿತು. ವಿವಿಧ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದ ಹಿರಿಯ ಜೀವಗಳು ದಿನವಿಡಿ ಸಂತಸದಿಂದ ಕಾಲ ಕಳೆಯಿತು.

ಮೇಯರ್‌ ಶೋಭಾ ಪಲ್ಲಾಗಟ್ಟೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜಿಲ್ಲಾ ಹಿರಯ ನಾಗರಿಕರ ಸಂಘದ ಗೌರವ ಕಾರ್ಯದರ್ಶಿ ಗುರುಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಸುರಕ್ಷಾ ಮಲ್ಟಿಪರ್ಪಸ್‌ ಡೆವಲಪ್‌ಮೆಂಟ್‌ ಅಸೋಸಿಯೇಷನ್‌ನ ಅಧ್ಯಕ್ಷ ಷಾನ್‌ನವಾಜ್‌ ಚಿತ್ತವಾಲೆ, ಹಿರಿಯ ನಾಗರಿಕರ ಸಹಾಯವಾಣಿಯ ಕಾರ್ಯದರ್ಶಿ ಕೆ.ಪಿ. ಮರಿಯಾಚಾರ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಎಚ್‌. ವಿಜಯಕುಮಾರ್‌, ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಜಿ.ಎಸ್‌. ಶಶಿಧರ ಹಾಜರಿದ್ದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮತ್ತು ವಿವಿಧ ಸಂಘ– ಸಂಸ್ಥೆಗಳ ಆಶ್ರಯದಲ್ಲಿ ಹಿರಿಯರ ನಾಗರಿಕರಿಗಾಗಿ ವಿವಿಧ ಸ್ಪರ್ಧೆಗಳು ನಡೆದವು.

ADVERTISEMENT

ಫಲಿತಾಂಶ:

ಪುರುಷರ ವಿಭಾಗ:

60ರಿಂದ 70 ವರ್ಷದೊಳಗಿನ 100 ಮೀ ಓಟ: ವಿಜಯಕುಮಾರ್‌ ಠಿಕಾರೆ–1, ನಾಗರಾಜರಾವ್‌ ಎನ್‌.ಎಸ್‌–2, ವೀರಣ್ಣ ಮುದಹದಡಿ–3; ಶಾಟ್‌ಪಟ್‌: ನಾಗರಾಜರಾವ್‌ ಎನ್‌.ಎಸ್‌–1, ವೀರಣ್ಣ ಮುದಹದಡಿ–2, ಈಶ್ವರಪ್ಪ–3; ಜನಪದ ಗೀತೆ: ಜಿ. ಪರಮೇಶ್ವರ ಕತ್ತಿಗೆ–1, ಬಿ. ಶರಣಪ್ಪ–2, ಬಸವರಾಜ ಡಿ.–3;

71ರಿಂದ 80 ವರ್ಷದೊಳಗಿನ 100 ಮೀ ಓಟ: ಗಣೇಶಪ್ಪ–1, ಗುರುಶಾಂತಪ್ಪ–2, ಎ.ಡಿ. ಶಿವಪ್ಪ–3; ಶಾಟ್‌ಪಟ್‌: ಜಿ.ಎಂ. ಬಸವನಗೌಡ–1, ಗಣೇಶಪ್ಪ–2, ಬಿ.ಎಂ. ಮಲ್ಲಿಕಾರ್ಜುನಯ್ಯ–3; ಜನಪದ ಗೀತೆ: ಗಣೇಶಪ್ಪ–1, ಚನ್ನಬಸಪ್ಪ ದಳವಾಯಿ–2, ಎಚ್‌. ಬಸವರಾಜಪ್ಪ;

81 ವರ್ಷ ಮೇಲಿನವರ 200 ಮೀ ನಡಿಗೆ: ಚನ್ನಬಸವಯ್ಯ–1, ಎಚ್‌.ಎನ್‌. ಕ್ಷೀರಸಾಗರ–2, ಮಹದೇವಪ್ಪ ಎನ್‌–3; ಕ್ರಿಕೆಟ್‌ ಚೆಂಡು ಎಸೆತ: ಎನ್‌. ಮಹದೇವಪ್ಪ–1, ಕೆ.ಎಸ್‌. ಮಹೇಶ್ವರಪ್ಪ–2, ಎಚ್‌.ಎನ್‌. ಕ್ರೀರಸಾಗರ; ಜನಪದ ಗೀತೆ: ಎಚ್‌. ಷಡಕ್ಷರಪ್ಪ–1, ಚನ್ನಬಸವಯ್ಯ–2, ಕೆ.ಎನ್‌. ಸ್ವಾಮಿ–3;

ಮಹಿಳೆಯರ ವಿಭಾಗ:

60ರಿಂದ 70 ವರ್ಷದೊಳಗಿನ 400 ಮೀ. ನಡಿಗೆ: ಮಂಗಳಗೌರಿ–1, ಶಕುಂತಲಾ ಬಿ.ಎಸ್‌–2, ಶಾಂತವೀರಮ್ಮ–3; ಕ್ರಿಕೆಟ್‌ ಚೆಂಡು ಎಸೆತ: ಭಾಗ್ಯ ರಾಯ್ಕರ್‌–1, ಪದ್ಮಾ–2, ಎಚ್‌.ಕೆ. ನಾಗರತ್ನಮ್ಮ–3; ಜನಪದ ಗೀತೆ: ಶಕುಂತಲಾ ಬಿ.ಎಸ್‌, ದಾಕ್ಷಾಯಣಮ್ಮ–2, ಸುಮಿತ್ರಾ–3; ಏಕಪಾತ್ರಾಭಿನಯ: ಎಂ.ವಿ. ದಾಕ್ಷಾಯಣಮ್ಮ–1, ಮಂಗಳಗೌರಿ–2;

71ರಿಂದ 80 ವರ್ಷದೊಳಗಿನ 200 ಮೀ. ನಡಿಗೆ: ದೊಡ್ಡಮ್ಮ–1, ಗೌರಮ್ಮ–2, ದಾಕ್ಷಾಯಿಣಿ ನಿಂಬೇಕಾಯಿ–3; ಕ್ರಿಕೆಟ್‌ ಚೆಂಡು ಎಸೆತ: ದೊಡ್ಡಮ್ಮ–1, ಸಿದ್ದಮ್ಮ–2, ಸುನಂದಾ ಕೆ.ಆರ್‌–3; ಜನಪದ ಗೀತೆ: ದೊಡ್ಡಮ್ಮ–1. ಏಕಪಾತ್ರಾಭಿನಯ: ದಾಕ್ಷಾಯಿಣಿ ನಿಂಬೇಕಾಯಿ–1, ದೊಡ್ಡಮ್ಮ–2;

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.