ADVERTISEMENT

ಚನ್ನಗಿರಿ: ನಿವೃತ್ತ ನೌಕರರ ಸಂಘದಿಂದ ಹಿರಿಯ ನಾಗರೀಕರ ದಿನಾಚರಣೆ

ನಿವೃತ್ತ ನೌಕರರ ಸಂಘದಿಂದ ಹಿರಿಯ ನಾಗರಿಕರ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2025, 14:31 IST
Last Updated 9 ಏಪ್ರಿಲ್ 2025, 14:31 IST
ಚನ್ನಗಿರಿಯ ಹಾಲಸ್ವಾಮಿ ಸಮುದಾಯ ಭವನದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ 75 ವರ್ಷ ತುಂಬಿದ ಹಿರಿಯ ನಾಗರಿಕರನ್ನು ಶಾಸಕ ಬಸವರಾಜು ವಿ. ಶಿವಗಂಗಾ ಹಾಗೂ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಸನ್ಮಾನಿಸಿದರು
ಚನ್ನಗಿರಿಯ ಹಾಲಸ್ವಾಮಿ ಸಮುದಾಯ ಭವನದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ 75 ವರ್ಷ ತುಂಬಿದ ಹಿರಿಯ ನಾಗರಿಕರನ್ನು ಶಾಸಕ ಬಸವರಾಜು ವಿ. ಶಿವಗಂಗಾ ಹಾಗೂ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಸನ್ಮಾನಿಸಿದರು    

ಚನ್ನಗಿರಿ: ನಾನೂ ಒಬ್ಬ ನಿವೃತ್ತ ನೌಕರನ ಮಗನಾಗಿದ್ದು, ನಿವೃತ್ತ ನೌಕರರು ಇಳಿ ವಯಸ್ಸಿನಲ್ಲಿ ಜೀವನ ಸಾಗಿಸುವುದನ್ನು ತುಂಬಾ ಹತ್ತಿರರಿಂದ ಕಂಡಿದ್ದೇನೆ. ಕ್ಷೇತ್ರದ ಅಭಿವೃದ್ಧಿಗೆ ಹಿರಿಯರ ಮಾರ್ಗದರ್ಶನ ಅಗತ್ಯ’ ಎಂದು ಶಾಸಕ ಬಸವರಾಜು ವಿ. ಶಿವಗಂಗಾ ತಿಳಿಸಿದರು.

ಪಟ್ಟಣದ ಹಾಲಸ್ವಾಮಿ ಸಮುದಾಯ ಭವನದಲ್ಲಿ ನಿವೃತ್ತ ನೌಕರರ ಸಂಘದಿಂದ ಬುಧವಾರ ನಡೆದ ಸರ್ವ ಸದಸ್ಯರ ಮಹಾಸಭೆ ಹಾಗೂ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರನ್ನು ಸನ್ಮಾನಿಸಿ ಮಾತನಾಡಿದರು.

‘ನಮ್ಮನ್ನು ಸಾಕಿ ಸಲುಹಿ ಸಮಾಜದಲ್ಲಿ ಉತ್ತಮ ಮನುಷ್ಯರನ್ನಾಗಿ ರೂಪಿಸಿದ ಹಿರಿಯ ಜೀವಗಳನ್ನು ತುಂಬಾ ಪ್ರೀತಿಯಿಂದ ಕಾಣಬೇಕು. ನಾವು ಇಂದು ಈ ಮಟ್ಟದಲ್ಲಿ ಇರಲು ಅವರ ಶ್ರಮ ಕಾರಣ. ಯಾವುದೇ ಕಾರಣಕ್ಕೂಯಾರೂ ಪಾಲಕರನ್ನು ಕಡೆಗಣಿಸಬಾರದು. ನಿವೃತ್ತಿ ಜೀವನದಲ್ಲಿ ಹಿರಿಯರಿಗೆ ಪ್ರೀತಿ ನೀಡಿ ವಿಶ್ವಾಸ ತೋರಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮಾತನಾಡಿದರು. ಇದೇ ಸಂದರ್ಭದಲ್ಲಿ 75 ವರ್ಷ ತುಂಬಿದ ಸಂಘದ 35 ಹಿರಿಯ ಸದಸ್ಯರನ್ನು ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಎಸ್.ಟಿ.ಶಾಂತ ಗಂಗಾಧರ್ ಹಾಗೂ ರಂಗ ಕಲಾವಿದ ಎಂ.ಅಣ್ಣೋಜಿರಾವ್ ಪವಾರ್ ಅವರನ್ನು  ಸನ್ಮಾನಿಸಲಾಯಿತು.

ನಿವೃತ್ತ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಜಿ.ಭರತ್ ರಾಜ್, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಎಸ್.ಗಣೇಶ್, ಜಗಳೂರು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಪಾಲಯ್ಯ ಉಪಸ್ಥಿತರಿದ್ದರು.

ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಎಂ.ಉಜ್ಜನಪ್ಪ ಅಧ್ಯಕ್ಷತೆ ವಹಿಸಿದ್ದರು. ಹಾಲಸ್ವಾಮಿ ವಿರಕ್ತ ಮಠದ ಬಸವ ಜಯಚಂದ್ರ ಸ್ವಾಮೀಜಿ ನೇತೃತ್ವ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.