ADVERTISEMENT

ದಾವಣಗೆರೆ ನಗರದ ಅಭಿವೃದ್ಧಿಗಾಗಿ ಪ್ರತ್ಯೇಕ ವಾಟ್ಸಪ್ ಗ್ರೂಪ್: ಮೇಯರ್

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2021, 11:10 IST
Last Updated 24 ಫೆಬ್ರುವರಿ 2021, 11:10 IST

ದಾವಣಗೆರೆ: ಜನರಿಗೆ ಸ್ವಚ್ಛತೆ, ನೀರು, ಬೀದಿದೀಪ ಮುಂತಾದ ಮೂಲ ಸೌಕರ್ಯ ಒದಗಿಸಬೇಕು. ಜನರು ಏನೇ ಸಮಸ್ಯೆ ಇದ್ದರೂ ಕೂಡಲೇ ತಿಳಿಸಿಲು ನಾಳೆಯೇ ಪ್ರತ್ಯೇಕ ವಾಟ್ಸಪ್ ನಂಬರ್ ನೀಡುತ್ತೇನೆ ಎಂದು ನೂತನ ಮೇಯರ್ ಎಸ್.ಟಿ. ವೀರೇಶ್ ತಿಳಿಸಿದರು.

ದಾವಣಗೆರೆ ಮಹಾನಗರ ಪಾಲಿಕೆಯ ಮೇಯರ್ ಆಗಿ ಆಯ್ಕೆಯಾದ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದರು. ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿದ್ದ ನನ್ನನ್ನು ಮೇಯರ್ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ. ಇದು ಬಿಜೆಪಿ ವಿಶೇಷತೆ. ನನಗೆ ವಹಿಸಿರುವ ದೊಡ್ಡ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುತ್ತೇನೆ ಎಂದರು.

ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, 'ನಮ್ಮಲ್ಲಿ ಎಲ್ಲ 21 ಮಂದಿ ಮೇಯರ್ ಆಕಾಂಕ್ಷಿಗಳು ಆಗಿದ್ದರು. ಕೋರ್ ಕಮಿಟಿ ಸೇರಿ ಇವತ್ತು ಬೆಳಿಗ್ಗೆ ವೀರೇಶ್ ಹೆಸರನ್ನು ಅಂತಿಮಗೊಳಿಸಿದೆವು' ಎಂದರು. ದೇವರಮನಿ ಶಿವಕುಮಾರ್ ಕಾಂಗ್ರೆಸ್ ನಲ್ಲಿ ಬೇಸತ್ತು ಬೇಷರತ್ತಾಗಿ ನಮ್ಮಲ್ಲಿಗೆ ಬಂದಿದ್ದರು. ಸೇರಿಸಿಕೊಂಡೆವು. ಯಾವುದೇ ಆಪರೇಷನ್ ಕಮಲ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.