
ಪ್ರಜಾವಾಣಿ ವಾರ್ತೆ
ದಾವಣಗೆರೆ: ‘ಬೀಗರಾದರೇನು ನಮ್ಮ ದಾರಿ ನಮಗೆ, ಅವರ ದಾರಿ ಅವರಿಗೆ..’
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಬಿಜೆಪಿ ಸೇರ್ಪಡೆಯಾಗಿರುವ ವಿಷಯ ಕುರಿತು ಶಾಸಕ ಶಾಮನೂರು ಶಿವಶಂಕರಪ್ಪ ಪ್ರತಿಕ್ರಿಯಿಸಿದ್ದು ಹೀಗೆ..
‘ಜಗದೀಶ ಶೆಟ್ಟರ್ ಬಂದ್ರು.. ಹೋದ್ರು ಅಷ್ಟೇ, ಅವರ ಸೇರ್ಪಡೆ ವಿಚಾರ ನನಗೆ ಗೊತ್ತಿಲ್ಲ. ಆ ಕುರಿತು ಮಾಹಿತಿಯೂ ಇಲ್ಲ. ಬೀಗರು ಆದರೆ ನಾವೇನು ಕೇಳೋದಕ್ಕೆ ಹೋಗೋಣ. ನಾನು ತಡವಾಗಿ ಎದ್ದಿರುವುದರಿಂದ ಪೂಜೆ ಮಾಡಲು ಬಂದಿದ್ದೇನೆ. ಹೋಗಿ ವಿಚಾರಿಸುತ್ತೇನೆ. ಈ ಕುರಿತು ಏನು ಚರ್ಚೆ ಮಾಡಿಲ್ಲಾ, ಕೇಳಿಲ್ಲ, ಹೇಳಿಲ್ಲ’ ಎಂದರು.
ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ ವಿಚಾರದಲ್ಲಿ ಶಾಮನೂರು ಶಿವಶಂಕರಪ್ಪ ಪ್ರಮುಖ ಪಾತ್ರ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.