ADVERTISEMENT

ದಾವಣಗೆರೆ: ದಾಖಲೆ ಇಲ್ಲದ 102 ಕೆ.ಜಿ. ಬೆಳ್ಳಿ ಕಾಲು ಚೈನು ವಶ

​ಪ್ರಜಾವಾಣಿ ವಾರ್ತೆ
Published 5 ಜುಲೈ 2022, 8:36 IST
Last Updated 5 ಜುಲೈ 2022, 8:36 IST
ದಾವಣಗೆರೆಯ ಬಡಾವಣೆ ಠಾಣೆಯ ಪೊಲೀಸರು ವಶಪಡಿಸಿಕೊಂಡಿರುವ ಬೆಳ್ಳಿಯ ಕಾಲು ಚೈನು
ದಾವಣಗೆರೆಯ ಬಡಾವಣೆ ಠಾಣೆಯ ಪೊಲೀಸರು ವಶಪಡಿಸಿಕೊಂಡಿರುವ ಬೆಳ್ಳಿಯ ಕಾಲು ಚೈನು   

ದಾವಣಗೆರೆ: ದಾಖಲೆಗಳು ಇಲ್ಲದೇ ಸಂಗ್ರಹಿಸಿಟ್ಟಿದ್ದ ₹20 ಲಕ್ಷ ಮೌಲ್ಯದ 102 ಕೆ.ಜಿ. ತೂಕದ ಬೆಳ್ಳಿ ಕಾಲು ಚೈನುಗಳನ್ನು ವಶಪಡಿಸಿಕೊಂಡಿರುವ ಇಲ್ಲಿನ ಬಡಾವಣೆ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ತಮಿಳುನಾಡಿನ ಸೆಲ್ವಂ ಹಾಗೂ ಬಾಲಾಜಿ ಬಂಧಿತರು.

ಬೆಳ್ಳಿ ಖರೀದಿಸಿರುವುದಕ್ಕೆ ಬಂಧಿತರ ಬಳಿ ಯಾವುದೇ ದಾಖಲೆಗಳು ಇಲ್ಲದೇ ಇರುವುದರಿಂದ ಕಳ್ಳತನ ಮಾಡಿರಬಹುದು ಇಲ್ಲವೇ, ಹಳೆಯ ಬೆಳ್ಳಿಯನ್ನು ಪಾಲಿಶ್ ಮಾಡಿ ಮಾರಾಟ ಮಾಡಲು ತಂದಿರಬಹುದೇ ಎನ್ನುವುದರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಸಂಚಾರ ನಿಯಮ ಉಲ್ಲಂಘನೆ: ₹1.03 ಕೋಟಿ ದಂಡ ವಸೂಲಿ
2022ರ ಜನವರಿ 1 ರಿಂದ ಜೂನ್ 30ರವರೆಗೆ ಸಂಚಾರ ನಿಯಮ ಉಲ್ಲಂಘನೆ ಸಂಬಂಧ 25.088 ಪ್ರಕರಣಗಳನ್ನು ದಾಖಲಿಸಿ ₹1.03 ಕೋಟಿ ದಂಡ ವಸೂಲಿ ಮಾಡಲಾಗಿದೆ. 68 ಪ್ರಕರಣಗಳಲ್ಲಿ ಚಾಲನಾ ಪರವಾನಗಿಯನ್ನು ರದ್ದುಗೊಳಿಸಲಾಗಿದೆ. 83 ತ್ರಿಬಲ್ ರೈಡಿಂಗ್ ಪ್ರಕರಣಗಳು ದಾಖಲಾಗಿವೆ. ರಸ್ತೆ ಅಪಘಾತ ಸಂಬಂಧ 8 ಮಂದಿಯ ಡಿ.ಎಲ್ ಅಮಾನತು ಮಾಡಲಾಗಿದೆ ಎಂದು ಹೇಳಿದರು. ಕರ್ಕಶ ಶಬ್ದ ಮಾಡುತ್ತಿದ್ದ 52 ಸೈಲೆನ್ಸರ್ ಪೈಪ್ ಗಳನ್ನು ನಾಶಪಡಿಸಲಾಯಿತು ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.