ADVERTISEMENT

ಹರಿಹರ: ‘ಸಾಮಾಜಿಕ ನ್ಯಾಯ ಜಾರಿಯಿಂದ ಸಮಸ್ಯೆಗಳಿಗೆ ಪರಿಹಾರ’

​ಪ್ರಜಾವಾಣಿ ವಾರ್ತೆ
Published 22 ಮೇ 2025, 14:27 IST
Last Updated 22 ಮೇ 2025, 14:27 IST
ಹರಿಹರದಲ್ಲಿ ಬುಧವಾರ ಎಸ್‌ಡಿಪಿಐಯಿಂದ ಆಯೋಜಿಸಿದ್ದ ದಿಟ್ಟ ನಾಯಕತ್ವ-ಬಲಿಷ್ಠ ಕಾರ್ಯಕರ್ತ ಸಮಾವೇಶದಲ್ಲಿ ಪಕ್ಷದ ಮುಖಂಡ ಫಯಾಜ್ ಅಹ್ಮದ್ ಮಾತನಾಡಿದರು
ಹರಿಹರದಲ್ಲಿ ಬುಧವಾರ ಎಸ್‌ಡಿಪಿಐಯಿಂದ ಆಯೋಜಿಸಿದ್ದ ದಿಟ್ಟ ನಾಯಕತ್ವ-ಬಲಿಷ್ಠ ಕಾರ್ಯಕರ್ತ ಸಮಾವೇಶದಲ್ಲಿ ಪಕ್ಷದ ಮುಖಂಡ ಫಯಾಜ್ ಅಹ್ಮದ್ ಮಾತನಾಡಿದರು   

ಹರಿಹರ: ಸಾಂವಿಧಾನಿಕ ಹಕ್ಕುಗಳು ಹಾಗೂ ಸಾಮಾಜಿಕ ನ್ಯಾಯವನ್ನು ಪ್ರಾಮಾಣಿಕವಾಗಿ ದೊರಕಿಸಿದರೆ ದೇಶದ ಪ್ರಮುಖ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ರಾಜ್ಯ ಸಮಿತಿ ಸದಸ್ಯ ಫಯಾಜ್ ಅಹ್ಮದ್ ಹೇಳಿದರು.

ನಗರದ ಅಂಜುಮನ್ ಕಲ್ಯಾಣ ಮಂಟಪದಲ್ಲಿ ಬುಧವಾರ ಎಸ್‌ಡಿಪಿಐಯಿಂದ ಆಯೋಜಿಸಿದ್ದ ದಿಟ್ಟ ನಾಯಕತ್ವ-ಬಲಿಷ್ಠ ಕಾರ್ಯಕರ್ತ ಸಮಾವೇಶದಲ್ಲಿ ಅವರು ಮಾತನಾಡಿದರು.

ಹಕ್ಕುಗಳು ಹಾಗೂ ಸಾಮಾಜಿಕ ನ್ಯಾಯ ನಿರಾಕರಿಸಿದಾಗ ದೇಶದ ನಿವಾಸಿಗಳಿಂದ ಅಸಹನೆ ವ್ಯಕ್ತವಾಗುತ್ತದೆ. ಇದು ಆಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಆಡಳಿತ ನಡೆಸುವವರ ಮೇಲಿದೆ ಎಂದರು.

ADVERTISEMENT

ರಾಷ್ಟ್ರ, ರಾಜ್ಯ ಮಟ್ಟದ ಜೊತೆಗೆ ಸ್ಥಳೀಯ ಸಮಸ್ಯೆಗಳ ನಿವಾರಣೆಗೂ ಪಕ್ಷದ ಕಾರ್ಯಕರ್ತ ಧ್ವನಿ ಎತ್ತಬೇಕು. ಸಮಸ್ಯೆಗಳಿಗೆ ಪರಿಹಾರ ದೊರಕಿಸಿದರೆ ಪಕ್ಷದ ಕಾರ್ಯಕರ್ತರು ಬಲಿಷ್ಠ ನಾಯಕರಾಗಿ ಬೆಳೆಯುತ್ತಾರೆ ಎಂದು ಹೇಳಿದರು.

ಸಮಾವೇಶದ ಅಂತ್ಯದಲ್ಲಿ ಬಲಿಷ್ಠ ಸಂಘಟನೆ ನಿರ್ಮಾಣಕ್ಕೆ ಸಂಕಲ್ಪ ಕೈಗೊಳ್ಳಲಾಯಿತು.

ಪಕ್ಷದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಎ.ಆರ್.ತಾಹೀರ್, ಕೋಶಾಧಿಕಾರಿ ಮೊಹಮ್ಮದ್ ಅಜರುದ್ದೀನ್, ಕಾರ್ಯದರ್ಶಿ ಮೊಹಮ್ಮದ್ ಜುನೈದ್, ಹರಿಹರ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಸಮಿಉಲ್ಲಾ, ಹಾಗೂ ಜಿಲ್ಲಾ ಮತ್ತು ವಿಧಾನಸಭಾ ಕ್ಷೇತ್ರ ಸಮಿತಿ ಸದಸ್ಯರು, ಸೇರಿದಂತೆ ಪಕ್ಷದ ಕಾರ್ಯಕರ್ತರು ಮತ್ತು ಸದಸ್ಯರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.