ADVERTISEMENT

ದಾವಣಗೆರೆ: ಎಸ್ಸೆಸ್ಸೆಲ್ಸಿ ಫಲಿತಾಂಶ: ನಾಲ್ವರು 625ಕ್ಕೆ 625

423 ಪ್ರೌಢಶಾಲೆಗಳಿಗೆ ಎ ಗ್ರೇಡ್‌, 21 ಶಾಲೆಗಳಿಗೆ ಬಿ ಗ್ರೇಡ್‌

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2021, 3:22 IST
Last Updated 10 ಆಗಸ್ಟ್ 2021, 3:22 IST
sslc
sslc   

ದಾವಣಗೆರೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಜಿಲ್ಲೆಯ ನಾಲ್ವರು ವಿದ್ಯಾರ್ಥಿಗಳು 625ಕ್ಕೆ 625 ಅಂಕ ಗಳಿಸಿದ್ದಾರೆ. ಮಕ್ಕಳು ಗಳಿಸಿದ ಅಂಕದ ಆಧಾರದಲ್ಲಿ ಜಿಲ್ಲೆಯ 423 ಪ್ರೌಢಶಾಲೆಗಳನ್ನು ‘ಎ’ ಗ್ರೇಡ್‌, 21 ಪ್ರೌಢಶಾಲೆಗಳನ್ನು ‘ಬಿ’ ಗ್ರೇಡ್‌ ಎಂದು ಗುರುತಿಸಲಾಗಿದೆ.

ಸಿದ್ಧಗಂಗಾ ಪ್ರೌಢಶಾಲೆಯ ಅನುಷಾ ಗ್ರೇಸ್‌ ಡಿ. ಚಿಂದವಾಳ್‌ ಮತ್ತು ವಿಜೇತ ಬಸವರಾಜ ಮುತ್ತಗಿ, ಅನುಭವ ಮಂಟಪ ತರಳಬಾಳು ಪ್ರೌಢಶಾಲೆಯ ಮೋನಿಷಾ ಎಂ.ಎನ್‌., ಹರಿಹರ ತಾಲ್ಲೂಕು ಎರೆಹೊಸಳ್ಳಿಯ ಶ್ರೀ ಜ್ಞಾನಾಕ್ಷಿ ವಿದ್ಯಾನಿಕೇತನದ ರಕ್ಷಿತಾ ಉಮೇಶ್‌ ಪಾಟೀಲ್‌ 625ಕ್ಕೆ 625 ಅಂಕ ಗಳಿಸಿದ ವಿದ್ಯಾರ್ಥಿಗಳು.

ಜಿಲ್ಲೆಯಲ್ಲಿ 10,294 ವಿದ್ಯಾರ್ಥಿಗಳು, 10,160 ವಿದ್ಯಾರ್ಥಿನಿಯರು ಸೇರಿ ಒಟ್ಟು 20,454 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಎಲ್ಲರೂ ಉತ್ತೀರ್ಣರಾಗಿದ್ದಾರೆ. 2,732 ಮಕ್ಕಳು ಎ ಪ್ಲಸ್‌, 7,351 ಮಕ್ಕಳು ಎ ಗ್ರೇಡ್‌, 8,326 ಮಕ್ಕಳು ಬಿ ಗ್ರೇಡ್‌ ಹಾಗೂ 2045 ಮಕ್ಕಳು ಸಿ ಗ್ರೇಡ್‌ನಲ್ಲಿ ಉತ್ತೀರ್ಣರಾಗಿದ್ದಾರೆ.

ADVERTISEMENT

ಸರ್ಕಾರಿ ಪ್ರೌಢಶಾಲೆಗಳ 441 ವಿದ್ಯಾರ್ಥಿಗಳು, 687 ವಿದ್ಯಾರ್ಥಿನಿಯರು, ಅನುದಾನಿತ ಪ್ರೌಢಶಾಲೆಗಳ 367 ವಿದ್ಯಾರ್ಥಿಗಳು, 511 ವಿದ್ಯಾರ್ಥಿನಿಯರು, ಅನುದಾನ ರಹಿತ ಪ್ರೌಢಶಾಲೆಗಳ 302 ವಿದ್ಯಾರ್ಥಿಗಳು 424 ವಿದ್ಯಾರ್ಥಿಗಳು ಎ ಪ್ಲಸ್‌ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ.

ಚನ್ನಗಿರಿ ಬ್ಲಾಕ್‌ ವ್ಯಾಪ್ತಿಯ ಎಲ್ಲ 26 ಶಾಲೆಗಳು, ಹರಿಹರ ಬ್ಲಾಕ್‌ ವ್ಯಾಪ್ತಿಯ ಎಲ್ಲ 61 ಶಾಲೆಗಳು ಹಾಗೂ ಜಗಳೂರು ಬ್ಲಾಕ್‌ ವ್ಯಾಪ್ತಿಯ ಎಲ್ಲ 48 ಶಾಲೆಗಳು ಎ ಗ್ರೇಡ್‌ ಪಡೆದಿವೆ. ದಾವಣಗೆರೆ ಉತ್ತರ ವ್ಯಾಪ್ತಿಯ 69 ಶಾಲೆಗಳು ಎ ಗ್ರೇಡ್‌, 6 ಶಾಲೆಗಳು ಬಿ ಗ್ರೇಡ್‌ ಪಡೆದಿವೆ. ದಾವಣಗೆರೆ ದಕ್ಷಿಣದ 117 ಶಾಲೆಗಳು ಎ ಗ್ರೇಡ್‌ ಮತ್ತು 8 ಶಾಲೆಗಳು ಬಿ ಗ್ರೇಡ್‌ ಪಡೆದಿವೆ. ಹೊನ್ನಾಳಿ ವ್ಯಾಪ್ತಿಯ 52 ಶಾಲೆಗಳು ಎ ಗ್ರೇಡ್‌, 7 ಶಾಲೆಗಳು ಬಿ ಗ್ರೇಡ್‌ ಗಳಿಸಿವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಸಿ.ಆರ್‌. ಪರಮೇಶ್ವರಪ್ಪ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.