ADVERTISEMENT

ರಾಜ್ಯ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌: ಮೂರನೇ ಸುತ್ತಿಗೆ ಭಾರ್ಗವ್‌, ದರ್ಶನ್‌

15, 17 ವರ್ಷದೊಳಗಿನವರ ರಾಜ್ಯ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2025, 19:52 IST
Last Updated 13 ಅಕ್ಟೋಬರ್ 2025, 19:52 IST
17 ವರ್ಷದೊಳಗಿನ ಬಾಲಕರ ಸಿಂಗಲ್ಸ್‌ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಗೆದ್ದ ದರ್ಶನ್ ಮಣಿಕಂಠನ್‌ ಷಟಲ್ ಹಿಂತಿರುಗಿಸಿದ ವೈಖರಿ –ಪ್ರಜಾವಾಣಿ ಚಿತ್ರ; ಸತೀಶ್ ಬಡಿಗೇರ
17 ವರ್ಷದೊಳಗಿನ ಬಾಲಕರ ಸಿಂಗಲ್ಸ್‌ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಗೆದ್ದ ದರ್ಶನ್ ಮಣಿಕಂಠನ್‌ ಷಟಲ್ ಹಿಂತಿರುಗಿಸಿದ ವೈಖರಿ –ಪ್ರಜಾವಾಣಿ ಚಿತ್ರ; ಸತೀಶ್ ಬಡಿಗೇರ   

ದಾವಣಗೆರೆ: ಬೆಂಗಳೂರಿನ ಭಾರ್ಗವ್‌ ರೆಡ್ಡಿ ಮತ್ತು ದರ್ಶನ್‌ ಮಣಿಕಂಠನ್‌ ಅವರು ರಾಜ್ಯ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನ 17 ವರ್ಷದೊಳಗಿನ ಬಾಲಕರ ಸಿಂಗಲ್ಸ್‌ ವಿಭಾಗದಲ್ಲಿ ಮೂರನೇ ಸುತ್ತು ಪ್ರವೇಶಿಸಿದ್ದಾರೆ. 

ರಾಜ್ಯ ಬ್ಯಾಡ್ಮಿಂಟನ್‌ ಸಂಸ್ಥೆ (ಕೆಬಿಎ) ಹಾಗೂ ದಾವಣಗೆರೆ ಜಿಲ್ಲಾ ಬ್ಯಾಡ್ಮಿಂಟನ್‌ ಸಂಸ್ಥೆಯ (ಡಿಡಿಬಿಎ) ಆಶ್ರಯದಲ್ಲಿ ಇಲ್ಲಿನ ನೇತಾಜಿ ಸುಭಾಷ್‌ಚಂದ್ರ ಬೋಸ್‌ ಒಳಾಂಗಣ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಭಾರ್ಗವ್‌ 15–12, 13–15, 15–12ರಿಂದ ಬೆಂಗಳೂರಿನವರೇ ಆದ ಎಚ್‌.ಪ್ರಲ್ಹಾದ್‌ ಅವರನ್ನು ಸೋಲಿಸಿದರು.

ಇನ್ನೊಂದು ಪಂದ್ಯದಲ್ಲಿ ದರ್ಶನ್‌ 15–16, 15–9ರಿಂದ ಧಾರವಾಡದ ಜೈ ಹುರಕಡ್ಲಿ ಅವರನ್ನು ಮಣಿಸಿದರು. ಇತರ ಪ್ರಮುಖ ಪಂದ್ಯಗಳಲ್ಲಿ ವೈಭವ್‌ ಸಾಯಿ ಗೌಡ 15–13, 15–7ರಿಂದ ಎಚ್‌.ಪುರವ್‌ ಎದುರೂ, ಅಮೋಘ್‌ ಪೊಲೀಸ್‌ ಪಾಟೀಲ 15–12, 15–12ರಿಂದ ಅಕ್ಷಯ್‌ ಅನಿರುದ್ಧ್‌ ವಿರುದ್ಧವೂ ಗೆದ್ದರು.

ADVERTISEMENT

17 ವರ್ಷದೊಳಗಿನ ಬಾಲಕಿಯರ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನ ಪ್ರಮುಖ ಪಂದ್ಯಗಳಲ್ಲಿ ವರ್ಷಿತಾ ಕಾರ್ಯಪ್ಪ 15–13, 15–13ರಿಂದ ಜೆಸ್ಸಿಲ್‌ ಜೆರಿನ್‌ ಎದುರೂ, ಅನ್ವಿ ಮಿಶ್ರಾ 15–13, 13–15, 15–8ರಿಂದ ಅದಿತಿ ಬಿ.ಎಸ್‌. ವಿರುದ್ಧವೂ ಹಾಗೂ ದೀಕ್ಷಾ ಎಂ.ಎಚ್‌ 16–14, 13–15, 21–20ರಿಂದ ಅಕ್ಷಿತಾ ಎದುರೂ ಜಯಿಸಿದರು.  

15 ವರ್ಷದೊಳಗಿನ ಬಾಲಕರ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನ ಪಂದ್ಯಗಳಲ್ಲಿ ಶೌರ್ಯ ವಿ.ಪಾಟೀಲ 15–2, 15–12ರಿಂದ ಚಿನ್ಮಯ್‌ ಎದುರೂ, ಪ್ರಣವ್‌ ಅಗರವಾಲ್‌ 15–10, 15–7ರಿಂದ ವಿಹಾನ್‌ ನಿಶ್ಚಿತ್‌ ಮೇಲೂ, ವೇದಾಂತ್‌ ರಾಜೀವ 14–16, 15–9, 15–7ರಿಂದ ಎಲ್ಡನ್‌ ಪಿಂಟೊ ವಿರುದ್ಧವೂ ಜಯ ಕಂಡರು. 

ಬಾಲಕಿಯರ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನ ಪಂದ್ಯಗಳಲ್ಲಿ ಮಾನ್ಯ ಶ್ರೀಕಾಂತ್‌ ಹೊಳ್ಳ 16–14, 15–17, 15–13ರಿಂದ ಆರ್‌.ಅರ್ಣ ಸಾಗರ್‌  ಎದುರೂ, ಅರ್ಸಿಯಾ ಬಾಬು 15–3, 15–1ರಿಂದ ವೇದಶ್ರೀ ಟಿ.ಪಟೇಲ್‌ ವಿರುದ್ಧವೂ ಗೆದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.