ದಾವಣಗೆರೆ: ತಾಲ್ಲೂಕಿನ ಆನಗೋಡಿನ ಪೇಂಟ್ ಅಂಗಡಿಯೊಂದರ ಚಾವಣಿಯ ತಗಡು ತೆಗೆದ ಕಳ್ಳರು ಅಂಗಡಿಯೊಳಗೆ ನುಗ್ಗಿ ಬಂಗಾರದ ಆಭರಣಗಳು, ಒಂದು ಟ್ಯಾಬ್ ಹಾಗೂ ₹ 1 ಲಕ್ಷವನ್ನು ದೋಚಿ ಪರಾರಿಯಾಗಿದ್ದಾರೆ.
ಪಿ.ಬಿ.ರಸ್ತೆಯ ಪಕ್ಕದಲ್ಲಿರುವ ವೈ.ಎಸ್. ಟ್ರೇಡರ್ಸ್‌ನಲ್ಲಿ ಕಳ್ಳತನ ನಡೆದಿದ್ದು, ಗಂಗನಕಟ್ಟೆ ಗ್ರಾಮದ ಶಿವರಾಜ್ ಹಾಗೂ ಅವರ ಅಣ್ಣ ಇಬ್ಬರೂ ವ್ಯಾಪಾರ ನಡೆಸುತ್ತಿದ್ದರು. ತಾಯಿಯ ಬಂಗಾರದ ಆಭರಣಗಳನ್ನು ಪೇಂಟ್ ಅಂಗಡಿಯ ಕ್ಯಾಶ್ ಡ್ರಾದಲ್ಲಿ ಇಟ್ಟಿದ್ದರು.
ಅಂಗಡಿಗೆ ನುಗ್ಗಿದ ಕಳ್ಳರು ₹1,20 ಲಕ್ಷ ಮೌಲ್ಯದ ಮಾಂಗಲ್ಯ ಸರ, 30 ಗ್ರಾಂನ ಎರಡು ಬಂಗಾರದ ಬಳೆಗಳು, 5 ಗ್ರಾಂ ಒಂದು ಜೊತೆ ಕಿವಿಯೋಲೆ, ಬಂಗಾರದ ಮೂಗುಬೊಟ್ಟು, ಎರಡು ಉಂಗುರ. ಗಣೇಶ ಡಾಲರ್‌ನ ಒಂದು ಚೈನ್, ಕಾಲು ಕಡಗ, ಸೇರಿ ಒಟ್ಟು ₹3 ಲಕ್ಷ ಮೌಲ್ಯದ ಬಂಗಾರದ ಆಭರಣಗಳು, ₹19,500 ಮೌಲ್ಯದ ಒಂದು ಟ್ಯಾಬ್ ಹಾಗೂ ನಗದು ಸೇರಿ ₹4.19 ಲಕ್ಷ ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ.
ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.