ADVERTISEMENT

ಹರಿಹರ: ಸೈಯದ್ ಅಬ್ದುಲ್ ಅಲೀಂ ನಗರಸಭೆ ಉಪಾಧ್ಯಕ್ಷ 

​ಪ್ರಜಾವಾಣಿ ವಾರ್ತೆ
Published 16 ಮೇ 2025, 15:26 IST
Last Updated 16 ಮೇ 2025, 15:26 IST
ಹರಿಹರ ನಗರಸಭೆ ಉಪಾಧ್ಯಕ್ಷರಾಗಿ ಶುಕ್ರವಾರ ಆಯ್ಕೆಯಾದ ಸೈಯದ್ ಅಬ್ದುಲ್ ಅಲೀಂ ಅವರನ್ನು ಅಭಿನಂದಿಸಲಾಯಿತು
ಹರಿಹರ ನಗರಸಭೆ ಉಪಾಧ್ಯಕ್ಷರಾಗಿ ಶುಕ್ರವಾರ ಆಯ್ಕೆಯಾದ ಸೈಯದ್ ಅಬ್ದುಲ್ ಅಲೀಂ ಅವರನ್ನು ಅಭಿನಂದಿಸಲಾಯಿತು   

ಹರಿಹರ: ಎಂ.ಜಂಬಣ್ಣ ಅವರ ರಾಜೀನಾಮೆಯಿಂದ ತೆರವಾಗಿದ್ದ ನಗರಸಭೆ ಉಪಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸೈಯದ್ ಅಬ್ದುಲ್ ಅಲೀಂ ಅವಿರೋಧವಾಗಿ ಆಯ್ಕೆಯಾದರು.

6ನೇ ವಾರ್ಡ್ ಸದಸ್ಯ ಸೈಯದ್ ಅಬ್ದುಲ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ, ಚುನಾವಣಾಧಿಕಾರಿ ಸಂತೋಷ್ ಕುಮಾರ್ ಅವರ ಆಯ್ಕೆಯನ್ನು ಪ್ರಕಟಿಸಿದರು.

ನಗರಸಭೆ ಅಧ್ಯಕ್ಷೆ ಕವಿತಾ ಬೇಡರ್, ಪೌರಾಯುಕ್ತೆ ಸುಬ್ರಹ್ಮಣ್ಯ ಶ್ರೇಷ್ಠಿ, ಸದಸ್ಯರಾದ ಶಂಕರ್ ಖಟಾವ್, ಎಸ್.ಎಂ ವಸಂತ್, ರಜನಿಕಾಂತ್, ಎಂ.ಜಂಬಣ್ಣ, ಬಿ.ಅಲ್ತಾಫ್, ಆರ್.ಜಾವೀದ್, ಕೆ.ಜಿ.ಸಿದ್ದೇಶ್, ಸುಮಿತ್ರ ಮರಿದೇವ್, ಪಕ್ಕೀರಮ್ಮ, ನಿಂಬಕ್ಕ ಚಂದಾಪುರ, ಎಸ್.ಕೆ.ಷಹಜಾದ್, ಲಕ್ಷ್ಮಿ ದುರುಗೋಜಿ, ಉಷಾ ಕಿರಣ್, ರತ್ನಮ್ಮ, ಶಾಹೀನಾ ಬಾನು, ಇಬ್ರಾಹಿಂ, ರೇಷ್ಮಾ ಬಾನು, ಎಂ.ಬಾಬುಲಾಲ್, ಪಾರ್ವತಮ್ಮ ಐರಣಿ ಇತರರು ಹಾಜರಿದ್ದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.