ADVERTISEMENT

ಜಿ. ಪಂ, ತಾ. ಪಂ ಚುನಾವಣೆ ಮೀಸಲಾತಿ ಪ್ರಕಟ: ನ್ಯಾಮತಿಯಲ್ಲಿ ಗರಿಗೆದರಿದ ರಾಜಕೀಯ

ಜಿ.ಪಂ.-ತಾ.ಪಂ. ಚುನಾವಣೆಗೆ ಮೀಸಲಾತಿ ಪ್ರಕಟ

ಡಿ.ಎಂ.ಹಾಲಾರಾಧ್ಯ
Published 6 ಜುಲೈ 2021, 2:19 IST
Last Updated 6 ಜುಲೈ 2021, 2:19 IST
ನ್ಯಾಮತಿ ತಾಲ್ಲೂಕು ಕಚೇರಿ (ಸಂಗ್ರಹ ಚಿತ್ರ)
ನ್ಯಾಮತಿ ತಾಲ್ಲೂಕು ಕಚೇರಿ (ಸಂಗ್ರಹ ಚಿತ್ರ)   

ನ್ಯಾಮತಿ: ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆ ಪೂರ್ವಭಾವಿಯಾಗಿ ರಾಜ್ಯ ಚುನಾವಣಾ ಆಯೋಗವು ಕ್ಷೇತ್ರವಾರು ಮೀಸಲಾತಿ ನಿಗದಿಗೊಳಿಸಿ ಪ್ರಕಟಿಸಿದ ಬೆನ್ನಲ್ಲೇ ತಾಲ್ಲೂಕಿನಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ.

ಹೊನ್ನಾಳಿ ತಾಲ್ಲೂಕಿನಿಂದ ವಿಭಜನೆಗೊಂಡ ನಂತರ ನ್ಯಾಮತಿ ನೂತನ ತಾಲ್ಲೂಕಿನಲ್ಲಿ ನಡೆಯುತ್ತಿರುವ ಪ್ರಥಮ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಟಿಕೆಟ್ ಆಕಾಂಕ್ಷಿಗಳು ಕಾರ್ಯೋನ್ಮುಖರಾಗಿದ್ದಾರೆ.

ತಾಲ್ಲೂಕಿನ ಕ್ಷೇತ್ರಗಳ ಮೀಸಲಾತಿ ಬದಲಾವಣೆಯಾಗಿದ್ದು, ಈಗಾಗಲೇ ಒಮ್ಮೆ ಚುನಾಯಿತರಾಗಿ ಮಾಜಿ ಆಗಿರುವವರು ಹಾಗೂ ನೂತನವಾಗಿ ಸ್ಪರ್ಧಿಸುವ ಆಕ್ಷಾಂಕ್ಷಿಗಳು ಚುನಾವಣೆಗೆ ಸಿದ್ಧರಾಗಿದ್ದು ಗುಪ್ತಸಭೆ ನಡೆಸುತ್ತಿದ್ದಾರೆ.

ADVERTISEMENT

ಈಗಾಗಲೇ ಆಡಳಿತರೂಢ ಬಿಜೆಪಿ ಶಾಸಕ ರೇಣುಕಾಚಾರ್ಯ ಹಾಗೂ ಕಾಂಗ್ರೆಸ್ ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಅವರು ನೂತನ ತಾಲ್ಲೂಕಿನ ಗದ್ದುಗೆ ಹಿಡಿಯುವ ಸಲುವಾಗಿ ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ.

ಕಳೆದ ಏಪ್ರಿಲ್, ಮೇ ತಿಂಗಳಲ್ಲಿ ಅಧಿಕಾರವಧಿ ಪೂರ್ಣಗೊಳಿಸಿದ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳಿಗೆ ಫೆಬ್ರುವರಿ ತಿಂಗಳಲ್ಲಿ ಕ್ಷೇತ್ರಗಳ ಪುನರ್ ರಚನೆಯ ಅಧಿಕೃತ ಪಟ್ಟಿ ಪ್ರಕಟಿಸಿತ್ತು. ಮತದಾರರ ಪಟ್ಟಿ ಪರಿಷ್ಕರಣೆ ಮತ್ತಿತರ ಸಿದ್ಧತೆ ಮಾಡಿಕೊಳ್ಳಲು ತಾಲ್ಲೂಕು ಆಡಳಿತ ಸಿದ್ಧತೆ ನಡೆಸಿತ್ತು. ರಾಜ್ಯದಾದ್ಯಂತ ಕೊರೊನಾ ಸೋಂಕು ವ್ಯಾಪಕವಾಗಿ ಆವರಿಸಿದ್ದರಿಂದ ಚುನಾವಣೆಯನ್ನು ಮುಂದೂಡಲಾಗಿತ್ತು. ಸದ್ಯ ಕ್ಷೇತ್ರವಾರು ಮೀಸಲಾತಿ ಪಟ್ಟಿಯನ್ನು ಚುನಾವಣಾ ಆಯೋಗ ಪ್ರಕಟಿಸಿದ್ದು, ಆಕ್ಷೇಪಣೆ ಸಲ್ಲಿಸಲು ಜುಲೈ 8ರ ವರೆಗೆ ಅವಕಾಶ ಕಲ್ಪಿಸಿದೆ. ನ್ಯಾಮತಿ ತಾಲ್ಲೂಕು ಕೇಂದ್ರವಾದ ಕಾರಣ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಕ್ಷೇತ್ರ ಜೋಗಕ್ಕೆ ಬದಲಾವಣೆ ಆಗಿದೆ. 3 ಜಿಲ್ಲಾ ಪಂಚಾಯಿತಿ ಹಾಗೂ 11 ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳಿವೆ.

ಜಿಲ್ಲಾ ಪಂಚಾಯಿತಿ ಕ್ಷೇತ್ರ: ಬೆಳಗುತ್ತಿ–ಅನುಸೂಚಿತ ಜಾತಿ, ಚೀಲೂರು– ಸಾಮಾನ್ಯ (ಮಹಿಳೆ), ಜೋಗ– ಸಾಮಾನ್ಯ

ತಾಲ್ಲೂಕು ಪಂಚಾಯಿತಿ ಕ್ಷೇತ್ರ: ಜೀನಹಳ್ಳಿ (ಕೆಂಚಿಕೊಪ್ಪ)– ಸಾಮಾನ್ಯ, ಬೆಳಗುತ್ತಿ– ಹಿಂದುಳಿದ ವರ್ಗ ‘ಅ’ (ಮಹಿಳೆ), ಬಸವನಹಳ್ಳಿ– ಸಾಮಾನ್ಯ, ಸುರಹೊನ್ನೆ– ಅನುಸೂಚಿತ ಪಂಗಡ (ಮಹಿಳೆ), ಗೋವಿನಕೋವಿ– ಅನುಸೂಚಿತ ಜಾತಿ, ಜೋಗ– ಅನುಸೂಚಿತ ಜಾತಿ (ಮಹಿಳೆ), ಸವಳಂಗ– ಅನುಸೂಚಿತ ಜಾತಿ (ಮಹಿಳೆ), ಚಟ್ನಹಳ್ಳಿ– ಸಾಮಾನ್ಯ, ಕುಂಕುವ (ಒಡೆಯರಹತ್ತೂರು)– ಸಾಮಾನ್ಯ ಮಹಿಳೆ, ಚೀಲೂರು– ಸಾಮಾನ್ಯ (ಮಹಿಳೆ) ಮತ್ತು ದೊಡ್ಡೇರಿ– ಸಾಮಾನ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.