ADVERTISEMENT

ಮಳೆಯ ನಡುವೆ ಮನೆಗಳಲ್ಲಿ ಬೆಳಗಿದ ಬೆಳಕು

ಮೋದಿ ಕರೆಗೆ ಓಗೊಟ್ಟ ಜನ * ದೀಪ ಹಚ್ಚುವುದರ ಜತೆಗೆ ಚಪ್ಪಾಳೆಯ ಸದ್ದು

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2020, 16:58 IST
Last Updated 5 ಏಪ್ರಿಲ್ 2020, 16:58 IST
ದಾವಣಗೆರೆಯ ವಿವಿಧೆಡೆ ದೀಪ ಬೆಳಗಲಾಯಿತು
ದಾವಣಗೆರೆಯ ವಿವಿಧೆಡೆ ದೀಪ ಬೆಳಗಲಾಯಿತು   

ದಾವಣಗೆರೆ: ವಿದ್ಯುತ್‌ ಲೈಟ್‌ಗಳನ್ನು ಆರಿಸಿ ದೀಪ, ಕ್ಯಾಂಡಲ್‌ಗಳನ್ನು ಹಚ್ಚಿ, ಇಲ್ಲವೇ ಟಾರ್ಚ್‌ ಬೆಳಗಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಕರೆಗೆ ದಾವಣಗೆರೆಯ ಜನರು ಓಗೊಟ್ಟಿದ್ದಾರೆ. ಮನೆಯ ಮುಂದೆ ದೀಪ ಹಚ್ಚಿದ್ದಾರೆ. ಕ್ಯಾಂಡಲ್‌ ಉರಿಸಿದ್ದಾರೆ. ಟಾರ್ಚ್‌ ಲೈಟ್‌ ಬೆಳಗಿದ್ದಾರೆ. ಈ ಬೆಳಕಿನಲ್ಲಿ ಸಂಭ್ರಮಿಸಿದ್ದಾರೆ.

ಭಾನುವಾರ ರಾತ್ರಿ 9 ಗಂಟೆ ಆಗುತ್ತಿದ್ದಂತೆ ಜನರು ಕೇಕೆ ಹಾಕಿದರು. ಬೋಲೋ ಭಾರತ್‌ ಮಾತಾ ಕೀ ಜೈ, ಮೋದಿ ಕೀ ಜೈ ಎಂದು ಕೂಗಿದರು. ದೀಪ ಹಚ್ಚಿ ಆರತಿ ಎತ್ತಿ ಪ್ರಾರ್ಥಿಸಿದರು. ಕೆಲವೆಡೆ ದೀಪಾವಳಿಯಂತೆ ಮನೆಯ ಕಾಂಪೌಂಡ್‌ಗಳ ಮೇಲೆ ದೀಪ ಇರಿಸಿದರು. ಹೆಣ್ಣು ಮಕ್ಕಳು ಹೆಚ್ಚಾಗಿ ಈ ಕೆಲಸ ಮಾಡಿದರೆ ಗಂಡಸರು ತಮ್ಮ ಮೊಬೈಲ್‌ಗಳಲ್ಲಿಯೇ ಟಾರ್ಚ್‌ ಬೆಳಗಿದರು. ದೀಪ ಹಚ್ಚಿ ‘ಗೋ ಕೊರೊನಾ’ ಎಂದು ಕೆಲವರು ಕೂಗಿದರೆ, ಕೆಲವರು ದೀಪವಿಟ್ಟು ಚಪ್ಪಾಳೆ ತಟ್ಟಿದರು. ಕೆಲವರು ಜನತಾ ಕರ್ಫ್ಯು ದಿನ ಮಾಡಿದಂತೆ ತಟ್ಟೆಗಳನ್ನು ಬಾರಿಸಿದರು. ಕೆಲವು ಕಡೆ ಈ ಬೆಳಕಿನಲ್ಲಿಯೇ ಕುಣಿದರು.

ಭಾನುವಾರ ಗುಡುಗು, ಸಿಡಿಲು, ಗಾಳಿಯೊಂದಿಗೆ ಮಳೆ ಬಂದಿದ್ದರಿಂದ ಹಲವೆಡೆ ವಿದ್ಯುತ್‌ ಸ್ಥಗಿತವಾಗಿತ್ತು. ಆದರೂ ಜನರು ನಿರುತ್ಸಾಹ ತೋರದೆ ಬೆಳಕು ಮೂಡಿಸಿದರು.

ADVERTISEMENT

ಹರಪನಹಳ್ಳಿ ತಾಲೂಕಿನ ಎಲ್ಲೆಡೆ ವರುಣನ ಅರ್ಭಟದಿಂದ ಒಳಗಿದ್ದ ಜನ ಹೊರಗಡೆ ಆಗಮಿಸಿ ದೀಪ ಬೆಳಗಿಸಲು ತೊಂದರೆ ಆಯಿತು. ಇದರ ನಡುವೆಯು ಮನೆಯ ಹೊರಾಂಗಣ, ಮನೆಯ ಒಳಗೆ ದೀಪ ಹಚ್ಚಿ ಪ್ರಧಾನಮಂತ್ರಿಗೆ ಕರೆಗೆ ಸ್ಪಂಧಿಸಿದರು, ವಿದ್ಯುತ್ ದೀಪ ನಾಲ್ಕು ತಾಸು ಬೆಸ್ಕಾಂ ಇಲಾಖೆಯೇ ಬಂದ್ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.