ADVERTISEMENT

ಐಸಿಇಟಿಎಸ್ಇಎಂ ಅಂತರರಾಷ್ಟ್ರೀಯ ಸಮ್ಮೇಳನ ಆರಂಭ

​ಪ್ರಜಾವಾಣಿ ವಾರ್ತೆ
Published 16 ಜುಲೈ 2021, 3:49 IST
Last Updated 16 ಜುಲೈ 2021, 3:49 IST
ದಾವಣಗೆರೆ ಜಿ.ಎಂ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಿಜ್ಞಾನ, ಎಂಜಿನಿಯರಿಂಗ್ ಮತ್ತು ನಿರ್ವಹಣೆಯಲ್ಲಿ ಉದಯೋನ್ಮುಖ ಪ್ರವೃತ್ತಿಗಳ ಕುರಿತ 2ನೇ ಅಂತರರಾಷ್ಟ್ರೀಯ ಸಮ್ಮೇಳನ ಗುರುವಾರ ವರ್ಚುವಲ್‌ ಮಾಧ್ಯಮದಲ್ಲಿ ಆರಂಭಗೊಂಡಿತು.
ದಾವಣಗೆರೆ ಜಿ.ಎಂ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಿಜ್ಞಾನ, ಎಂಜಿನಿಯರಿಂಗ್ ಮತ್ತು ನಿರ್ವಹಣೆಯಲ್ಲಿ ಉದಯೋನ್ಮುಖ ಪ್ರವೃತ್ತಿಗಳ ಕುರಿತ 2ನೇ ಅಂತರರಾಷ್ಟ್ರೀಯ ಸಮ್ಮೇಳನ ಗುರುವಾರ ವರ್ಚುವಲ್‌ ಮಾಧ್ಯಮದಲ್ಲಿ ಆರಂಭಗೊಂಡಿತು.   

ದಾವಣಗೆರೆ: ಜಿ.ಎಂ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಿಜ್ಞಾನ, ಎಂಜಿನಿಯರಿಂಗ್ ಮತ್ತು ನಿರ್ವಹಣೆಯಲ್ಲಿ ಉದಯೋನ್ಮುಖ ಪ್ರವೃತ್ತಿಗಳ ಕುರಿತ 2ನೇ ಅಂತರರಾಷ್ಟ್ರೀಯ ಸಮ್ಮೇಳನ ಗುರುವಾರ ವರ್ಚುವಲ್‌ ಮಾಧ್ಯಮದಲ್ಲಿ ಆರಂಭಗೊಂಡಿತು.

ಐಎಫ್ಇಆರ್‌ಪಿ ಸಹಯೋಗದೊಂದಿಗೆ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯನಿಕೇಶನ್ ವಿಭಾಗದವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮವನ್ನು 1500ಕ್ಕಿಂತ ಹೆಚ್ಚು ಮಂದಿ ವೀಕ್ಷಿಸಿದರು.

ಮ್ಯಾನೇಜಮೆಂಟ್ ಪ್ರತಿನಿಧಿ ವೈ.ಯು. ಸುಭಾಶಚಂದ್ರ, ಪ್ರಿನ್ಸಿಪಾಲ್‌ ಡಾ. ವೈ. ವಿಜಯಕುಮಾರ, ಆರ್ ಆ್ಯಂಡ್ ಡಿ ಇನ್ನೋವೇಶನ್ ನಿರ್ದೇಶಕ ಡಾ. ಎಸ್. ಮಂಜಪ್ಪ,ಅಕಾಡಮಿಕ್‌ ಡೀನ್‌ ಡಾ. ಸುನೀಲ್ ಕುಮಾರ್ ಬಿ.ಎಸ್., ಸಂಚಾಲಕ ಡಾ. ಪ್ರವೀಣ್‌ ಜೆ., ಆರ್‌ ಆ್ಯಂಡ್‌ ಐ ಡೀನ್‌ ಡಾ. ಭರತ ಕೆ.ಎನ್. ಉಪಸ್ಥಿತರಿದ್ದರು.

ADVERTISEMENT

ಪ್ರೊ. ವಿಕಾಸ್ ಯತ್ನಳ್ಳಿ, ಪ್ರೊ. ದೀಪ್ತಿ ಪಿ. ನಿರೂಪಿಸಿದರು. ಅಮೃತಾ, ಅನುಶ್ರಿ ಪ್ರಾರ್ಥಿಸಿದರು. ಡಾ. ಸುನೀಲ್ ಕುಮಾರ್ ಬಿ.ಎಸ್. ಸ್ವಾಗತಿಸಿದರು. ಡಾ. ಪ್ರವೀಣ್‌ ಜೆ. ಅವರು ಐಸಿಇಟಿಎಸ್ಇಎಂ ಬಗ್ಗೆ ಮಾಹಿತಿ ನೀಡಿದರು. ಡಾ. ಎಸ್. ಮಂಜಪ್ಪ ರಿಸರ್ಚ್, ಡೆವಲೆಪಮೆಂಟ್ ಮತ್ತು ಇನ್ನೋವೇಶನ್‍ ಮಹತ್ವದ ಬಗ್ಗೆ ತಿಳಿಸಿದರು. ಡಾ. ವೈ. ವಿಜಯಕುಮಾರ ಸಮ್ಮೇಳನದ ನಡಾವಳಿಗಳನ್ನು ಬಿಡುಗಡೆ ಮಾಡಿದರು. ಡಾ. ಭರತ ಕೆ.ಎನ್. ವಂದಿಸಿದರು.

ಒಟ್ಟು 383 ಪ್ರಬಂಧಗಳನ್ನು ಸ್ವೀಕರಿಸಲಾಗಿತ್ತು. ಪರಿಶೀಲನೆಯ ನಂತರ 246 ಪ್ರಬಂಧಗಳ ಕಿರುಪಟ್ಟಿ ಮಾಡಲಾಯಿತು. ಭಾರತದ 16 ರಾಜ್ಯಗಳಿಂದ ಹಾಗೂ ಹೊರ ದೇಶಗಳಿಂದ ಪ್ರಬಂಧಗಳನ್ನು ಸ್ವೀಕರಿಸಲಾಗಿತ್ತು. ಕೆನಡಾ, ಅಮೆರಿಕ, ಕಾನ್ಕಾರ್ಡಿಯಾ ವಿಶ್ವವಿದ್ಯಾಲಯಗಳಿಂದ ಮತ್ತು ಸೌದಿ ಅರೇಬಿಯಾದ ಕಿಂಗ್ ಸೌದ್ ವಿಶ್ವವಿದ್ಯಾಲಯಗಳಿಂದಲೂ ಪ್ರಬಂಧಗಳು ಬಂದಿದ್ದವು. ಈ ಸಮ್ಮೇಳನವು 8 ಟ್ರ್ಯಾಕ್‌ಗಳಲ್ಲಿ ಎರಡು ದಿನ ನಡೆಯಲಿದೆ. ಪ್ರತಿ ಟ್ರ್ಯಾಕ್‌ನಲ್ಲಿ 5 ಸಮಾನಾಂತರ ಅವಧಿಯನ್ನು ಹೊಂದಿರುತ್ತದೆ. ಪ್ರತಿ ಟ್ರಾಕ್‍ನಿಂದ ಪ್ರತಿ ಅವಧಿಯಲ್ಲಿ ಅತ್ಯುತ್ತಮ ಲೇಖನ ಮತ್ತು ಶೀರ್ಷಿಕೆ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.