ADVERTISEMENT

ನಕಲಿ ಎಟಿಎಂ ಕಾರ್ಡ್‌ ಮೂಲಕ ಕಳವು: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 9 ಜುಲೈ 2020, 16:01 IST
Last Updated 9 ಜುಲೈ 2020, 16:01 IST

ದಾವಣಗೆರೆ: ಎಟಿಎಂ ಕಾರ್ಡ್‌ ಬಳಸಲು ಬಾರದಿರುವವರಿಗೆ ಹಣ ಬಿಡಿಸಿ ಕೊಡುವುದಾಗಿ ನಂಬಿಸಿ ಎಟಿಎಂ ಪಿನ್‌ ನಂಬರ್‌ ಪಡೆದು, ಕಾರ್ಡ್‌ ಸ್ವೈಪ್‌ ಮಾಡಿ ಹಣ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಇಎನ್‌ ಅಪರಾಧ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಉತ್ತರ ಪ್ರದೇಶದ ಸರೋಜ್‌, ಹರಿಲಾಲ್‌ ಬಂಧಿತರು. ಬಂಧಿತರು ಎಟಿಎಂ ಕಾರ್ಡ್‌ ಬಳಸಲು ಬಾರದಿರುವವರೆಗೆ ಹಣ ಬಿಡಿಸಿಕೊಡುವುದಾಗಿ ಹೇಳಿ, ಅವರ ಕಾರ್ಡ್‌ ಪಡೆಯುತ್ತಿದ್ದರು. ಬಳಿಕ ಅಲ್ಲಿಯೇ ತಮ್ಮಲ್ಲಿದ್ದ ಸ್ವೈಪ್‌ ಯಂತ್ರದ ಮೂಲಕ ಎಟಿಎಂ ಕಾರ್ಡ್‌ ವಿವರ ಪಡೆಯುತ್ತಿದ್ದರು. ಎಟಿಎಂ ಕಾರ್ಡ್‌ದಾರರಿಂದ ಪಿನ್‌ ನಂಬರ್ ಪಡೆದು, ಬಳಿಕ ನಕಲಿ ಕಾರ್ಡ್‌ ಬಳಸಿ ಹಣ ದೋಚುತ್ತಿದ್ದರು.

‘ಈ ಬಗ್ಗೆ ಹರಪನಹಳ್ಳಿಯ ಬಂಡಿ ರಾಜಪ್ಪ ಎಂಬುವವರು ಸಲ್ಲಿಸಿದ್ದ ದೂರನ್ನು ಆಧರಿಸಿ ತನಿಖೆ ನಡೆಸಿದಾಗ ಆರೋಪಿತರ ಕೃತ್ಯ ಬಯಲಾಗಿದೆ. ಆರೋಪಿಗಳು ದಾವಣಗೆರೆ, ಹರಿಹರ ಹಾಗೂ ಹರಪನಹಳ್ಳಿ ಸೇರಿ ರಾಜ್ಯದ ವಿವಿಧೆಡೆ ನಕಲಿ ಎಟಿಎಂ ಮೂಲಕ ಹಣ ದೋಚುತ್ತಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.