ಸಾಂದರ್ಭಿಕ ಚಿತ್ರ
– ಐ ಸ್ಟಾಕ್ ಚಿತ್ರ
ಹರಿಹರ: ತಾಲ್ಲೂಕಿನ ಕೊಂಡಜ್ಜಿ ಗ್ರಾಮದಲ್ಲಿ ಬಾಗಿಲು ಕೊಂಡಿ ಮುರಿದು ಮನೆಯಲ್ಲಿದ್ದ ಬಂಗಾರ, ಬೆಳ್ಳಿ ಆಭರಣ, ನಗದು ಸೇರಿ ₹ 1.43 ಲಕ್ಷ ಮೌಲ್ಯದ ಸ್ವತ್ತನ್ನು ಕಳ್ಳತನ ಮಾಡಿದ್ದು ಬುಧವಾರ ಗೊತ್ತಾಗಿದೆ.
ಗ್ರಾಮದ ಕೃಷಿಕ ಕರಿಬೇಶಕುಮಾರ ಮಂಗಳವಾರ ಮಧ್ಯಾಹ್ನ 3ಕ್ಕೆ ಮನೆಗೆ ಬೀಗ ಹಾಕಿಕೊಂಡು ಬೆಳ್ಳೂಡಿಗೆ ಹೋಗಿದ್ದರು. ಬುಧವಾರ ಬೆಳಿಗ್ಗೆ 10ಕ್ಕೆ ಅವರ ಅಕ್ಕ ಫೋನ್ ಮಾಡಿ ಮನೆ ಬಾಗಿಲು ತೆರೆದಿರುವ ವಿಷಯ ತಿಳಿಸಿದ್ದಾರೆ.
ಸ್ಥಳಕ್ಕೆ ಬಂದು ನೋಡಲಾಗಿ ಬಾಗಿಲು ಬೀಗದ ಕೊಂಡಿಯನ್ನು ಮುರಿದು, ಬೀರುವಿನಲ್ಲಿದ್ದ ಅಂದಾಜು ₹ 63 ಸಾವಿರ ಮೌಲ್ಯದ ಚಿನ್ನ, 5 ಸಾವಿರ ಬೆಲೆಯ ಬೆಳ್ಳಿ ಆಭರಣ ಮತ್ತು ₹ 75 ಸಾವಿರ ನಗದು ಕಳವು ಮಾಡಿದ್ದು ಗೊತ್ತಾಗಿದೆ.
ಸ್ಥಳಕ್ಕೆ ಬಂದ ಬೆರಳಚ್ಚು ತಜ್ಞರು, ಪೊಲೀಸರುಡಿ ಪರಿಶೀಲನೆ ನಡೆಸಿದರು. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.