ಮಾಯಕೊಂಡ: ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಉಗ್ರರ ನೆಲೆಗಳನ್ನು ಧ್ವಂಸ ಮಾಡಿದ ಭಾರತೀಯ ಸೈನ್ಯದ ಪರಾಕ್ರಮ ಬೆಂಬಲಿಸಿ ಗುರುವಾರ ಇಲ್ಲಿ ತಿರಂಗ ಯಾತ್ರೆ ನಡೆಸಲಾಯಿತು. ಗ್ರಾಮದ ಹಿರೇ ಮದಕರಿ ನಾಯಕರ ಸಮಾಧಿಯಿಂದ ಶುರುವಾದ ಯಾತ್ರೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
‘ಪಾಕಿಸ್ತಾನಕ್ಕೆ ನಮ್ಮ ಮೇಲೆ ಯುದ್ಧ ಮಾಡುವ ಶಕ್ತಿ ಇಲ್ಲ ಹೀಗಾಗಿ ಉಗ್ರರನ್ನ ಪೋಷಿಸಿ ಭಾರತಕ್ಕೆ ಕಳುಹಿಸುತ್ತಿದೆ. ಭಾರತ ವಿಶ್ವದ ದೊಡ್ಡಣ್ಣನಾಗಿ ಬದಲಾಗಿದೆ. ನರೇಂದ್ರ ಮೋದಿಯವರ ಕಠಿಣ ನಿಲುವುಗಳಿಂದ ದೇಶ ಪ್ರಬಲವಾಗಿದೆ. ‘ಆಪರೇಷನ್ ಸಿಂಧೂರ’ದ ಯಶಸ್ಸಿಗೆ ತಿರಂಗ ಯಾತ್ರೆ ಹಮ್ಮಿಕೊಳಗಳಲಾಗಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ಹೇಳಿದರು.
ಸೈನಿಕರಿಗೆ ಪ್ರಧಾನಮಂತ್ರಿ ಧೈರ್ಯ ತುಂಬಿದ ಪರಿಣಾಮ ಯಶಸ್ಸು ಲಭಿಸಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಬಿ.ಜಿ. ಸಚಿನ್ ಅಭಿಪ್ರಾಯಪಟ್ಟರು.
‘ನಮ್ಮ ಹೆಮ್ಮೆಯ ಸೇನೆಯನ್ನು ಅವಹೇಳನ ಮಾಡಿರುವ ಕೆಲ ಕಿಡಗೇಡಿ ದೇಶದ್ರೋಹಿಗಳಿಗೆ ನಮ್ಮ ಧಿಕ್ಕಾರವಿದೆ’ ಎಂದು ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಬಸವಾಪುರ ರಮೇಶ್ ಹೇಳಿದರು.
‘ಪ್ರಸ್ತುತ ಜಮ್ಮು–ಕಾಶ್ಮೀರದಲ್ಲಿ ಸೈನಿಕರು ಮತ್ತು ಜನರ ಸ್ಥಿತಿ ಸುಧಾರಣೆಯಾಗಿದೆ’ ಎಂದು ಸಿಆರ್‌ಪಿಎಫ್ ನಿವೃತ್ತ ಯೋಧ ಕಲ್ಲೇಶ್ ಹೇಳಿದರು.
ಯೋಧರಾದ ಮಾಯಕೊಂಡದ ಕಲ್ಲೇಶ್, ಮಹಾಂತೇಶ್, ತೋಳಹುಣಸೆ ಶ್ಯಾಮಾನಾಯ್ಕ ಅವರನ್ನ ಗೌರವಿಸಲಾಯಿತು. ತ್ಯಾವಣಿಗೆ ಕೃಷ್ಣಕುಮಾರ್, ಕರಿಲಕ್ಕೇನಹಳ್ಳಿ, ಓಂಕಾರಪ್ಪ, ಸಂಡೂರ್ ರಾಜಶೇಖರ್, ದೊಡ್ಡಘಟ್ಟ ಮಲ್ಲಿಕಾರ್ಜುನ್, ಶಿವಣ್ಣ, ದ್ವಾರಕನಾಥ್, ಬಾಲರಾಜ್, ನಾಗರಾಜ್, ಶಶಿಧರ್, ಅಶೋಕ್ ಪೂಜಾರ್, ಎಂಜಿ. ಗುರುನಾಥ್, ಮಹಾಬಲೇಶ್, ಕಬ್ಬೂರ್ ಶಿವಣ್ಣ, ಹುಚ್ಚವ್ವನಹಳ್ಳಿ ಲತಾ, ಓಂಕಾರಪ್ಪ, ಮಾಯಣ್ಣ, ಕಲ್ಪನಹಳ್ಳಿ ರಾಕೇಶ್, ಹೆಬ್ಬಾಳು ಉಮೇಶ್, ಈಚಗಟ್ಟ ರವಿ, ಹೆದ್ನೆ ಸಂತೋಷ್, ನೇರ್ಲಿಗೆ ಕರಿಯಣ್ಣ, ಕ್ಯಾತನಹಳ್ಳಿ ರಮೇಶ್, ಬಸವರಾಜ್, ಗೋಪನಾಳು ಕೆಂಚವೀರಪ್ಪ, ಕಣಿವೆಬಿಳ್ಚಿ ಅಜ್ಜಯ್ಯ, ಮಂಜಣ್ಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.